ಭಾರೀ ಮಳೆ :ಪೆರುವಾಜೆ ಜಲದುರ್ಗಾ ದೇವಸ್ಥಾನ ಜಲಾವೃತ ..!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಬೆಳ್ಳಾರೆ ಸಮೀಪದ ಪೆರುವಾಜೆಯ ಜಲದುರ್ಗಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇಲ್ಲಿ ಹರಿಯುತ್ತಿರುವ ಗೌರಿಹೊಳೆ ಉಕ್ಕಿ ಹರಿದು ದೇವಸ್ಥಾನದ ಒಳಗೆ ನೀರು ನುಗ್ಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಬೆಳ್ಳಾರೆ ಸಮೀಪದ ಪೆರುವಾಜೆಯ ಜಲದುರ್ಗಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇಲ್ಲಿ ಹರಿಯುತ್ತಿರುವ ಗೌರಿಹೊಳೆ ಉಕ್ಕಿ ಹರಿದು ದೇವಸ್ಥಾನದ ಒಳಗೆ ನೀರು ನುಗ್ಗಿದೆ.
ಉಪ್ಪಿನಂಗಡಿ: ಜು,30,ದ.ಕ ಜಿಲ್ಲೆಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನೇತ್ರಾವತಿ- ಕುಮಾರಧಾರ ಉಕ್ಕಿ ಹರಿಯುತ್ತಿದೆ, ಇವೆರಡೂ ನದಿಗಳು ಸಂಗಮತಾಣ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎಲ್ಲಾ ಮೆಟ್ಟಿಲುಗಳು ಮುಳುಗಡೆಗೊಂಡಿದ್ದು, ಸಹಸ್ರಲಿಂಗನ ಸನ್ನಿಧಿಯಲ್ಲಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹಾಸನ : ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರೆದಿದ್ದು, ಕೆಲವೆಡೆ ಗುಡ್ಡ, ಮಣ್ಣು ಕುಸಿಯುತ್ತಿದೆ. ಹಾಸನದ ಸಕಲೇಶಪುರದಲ್ಲೂ ಮಳೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ರಸ್ತೆ ಸಮೇತ ಭೂಮಿ ಕೊಚ್ಚಿ ಹೋಗಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್…
ಉಪ್ಪಿನಂಗಡಿ ಸಮೀಪತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಆರಂಭಿಸಿದೆ, ಇದರಿಂದ ಉಪ್ಪಿನಂಗಡಿ ಗುಂಡ್ಯ, ಹಾಸನ ಸಂಪರ್ಕಿಸುವ ರಸ್ತೆಯಲ್ಲಿ ಕಡಿತವಾಗುವ ಸಾದ್ಯತೆ ಇದೆ, ರಸ್ತೆಯೆಲ್ಲಾ ನದಿ ನೀರು ಬಂದಿದ್ದು ಘನ ವಾಹನ ಮಾತ್ರ ರಸ್ತೆತಯಲ್ಲಿ ತೆರಳುತ್ತಿದೆ ನೀರಿನ ಮಟ್ಟ ಇನ್ನೂ ಏರಿದಲ್ಲಿ ಮಂಗಳೂರು ಬೆಂಗಳೂರು ಸಂಪರ್ಕ ಬಂದ್…
ಸುಳ್ಯ : ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಬಂದ್ ಆಗಿರುವುದಾಗಿ ತಿಳಿದುಬಂದಿದೆ. ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು 2 ಬದಿಗಳಲ್ಲಿ ವಾಹನಗಳು…
ಕೊಡಗು ಜು.30 : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 6 ಜಾನುವಾರುಗಳು (ಹಸು, ಕರು )ಬಲಿಯಾಗಿರುವ ಘಟನೆ ಹುದಿಕೇರಿ ಹೋಬಳಿ ತೆರಾಲು ಗ್ರಾಮದಲ್ಲಿ ನಡೆದಿದೆ. ಬೊಜ್ಜoಗಡ ನಟರಾಜ್ (ನಂದಾ,) ಅವರಿಗೆ ಸೇರಿದ ಜಾನುವಾರುಗಳು ಕೊಟ್ಟಿಗೆಗೆ ಬರುತ್ತಿದ್ದ ವೇಳೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದರಿಂದ…
ಚಾರ್ಮಾಡಿ ಘಾಟ್ನಲ್ಲಿ ಪ್ರತಿ ವರ್ಷವೂ ಮಳೆಯಾದಾಗ ಗುಡ್ಡ ಕುಸಿತ ಆಗುತ್ತಲೇ ಇರುತ್ತದೆ. ಇದೀಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು, ಮರ ಬಿದ್ದಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ…
ವಯನಾಡು, ಜುಲೈ 30: ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಇಂದು (ಮಂಗಳವಾರ) ಮುಂಜಾನೆ 4.30 ರ ಸುಮಾರಿಗೆ ಭಾರಿ ಭೂಕುಸಿತ ಸಂಭವಿಸಿದ್ದು, ಪ್ರಾರ್ಥಮಿಕ ಮಾಹಿತಿ ಪ್ರಕಾರ 31 ಜನ ಈಗಾಗಲೇ ಸಾವನ್ನಪ್ಪಿದ್ದು 100 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ…
ಕೊಡಗು ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಕಡೆ ಬರೆ ಕುಸಿದು ಹಾನಿಯಾಗುತ್ತಿರುವ ಘಟನೆ ವರದಿಯಾಗುತ್ತಿದೆ,ಗಡಿ ಗ್ರಾಮ ಪೆರಾಜೆಯಲ್ಲಿ ಹಲವು ಕಡೆಗಳಲ್ಲಿ ಹಾನಿ ಉಂಟಾಗಿದೆ, ಚಾಮಕಜೆ, ನಿಡ್ಯಮಲೆ ರಸ್ತೆ ಸಂಪರ್ಕ ಕಡಿತ ಉಂಟಾಗಿದೆ, ಚಾಮಕಜೆ ಕುಶಾಲಪ್ಪ ಎಂಬವರ ಮನೆಗೆ ಮಣ್ಣು ಕುಸಿದು ಹಾನಿಯಾಗಿದೆ , ನಿಡ್ಯಮಲೆ…
ಮಂಗಳೂರು ಜುಲೈ 30: ಎರಡು ಮೂರು ದಿನಗಳ ಬಿಡುವಿನ ಬಳಿಕ ಮತ್ತೆ ಮಳೆ ಅಬ್ಬರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈಗಾಗಲೇ ನಿನ್ನೆಯಿಂದ ಸುರಿಯುತ್ತಿರುವ ಗಾಳಿ ಮಳೆಗೆ ಹಲವೆಡೆ ಹಾನಿಯಾಗಿದೆ. ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗಿದ್ದು ಅಪಾಯಮಟ್ಟದಲ್ಲಿ ಹರಿಯುತ್ತಿದ್ದಾಳೆ. ಕೆಲವು ಕಡೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ದಕ್ಷಿಣಕನ್ನಡದಲ್ಲಿ ಮತ್ತೆ ಮಳೆ…
Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes