ಮೂತ್ರ ವಿಸರ್ಜನೆ ಪ್ರಕರಣ – ಸಂತ್ರಸ್ಥನ ಪಾದ ತೊಳೆದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌.
ರಾಜ್ಯ

ಮೂತ್ರ ವಿಸರ್ಜನೆ ಪ್ರಕರಣ – ಸಂತ್ರಸ್ಥನ ಪಾದ ತೊಳೆದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌.

ಭೋಪಾಲ್‌ ಜುಲೈ 06 : ಕಾರ್ಮಿಕನೊಬ್ಬನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌, ಕಾರ್ಮಿಕ ದಶಮತ್‌ ರಾವತ್‌ ಅವರ ಪಾದ ತೊಳೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ…

ಬೆಳ್ಳಾರೆಯಲ್ಲಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನಸಹಕಾರ ಸಂಘದ 9ನೇ ಶಾಖೆ ಉದ್ಘಾಟನೆ.
ರಾಜ್ಯ

ಬೆಳ್ಳಾರೆಯಲ್ಲಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ
ಸಹಕಾರ ಸಂಘದ 9ನೇ ಶಾಖೆ ಉದ್ಘಾಟನೆ.

ನಂಬಿಕೆ ಮತ್ತು ಪ್ರೀತಿ ಉಳಿಸಿಕೊಂಡ ಕಾರಣ ಸಂಘ ಯಶಸ್ವಿಯಾಗಿ 9 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ, ಬೆಳ್ಳಾರೆ ಪ್ರಗತಿಯ ತಾಣ ,ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಖಜಾನೆಯ ತಾಣ ಬೆಳ್ಳಾರೆ, ಮುಂದೆ ಈ ಸಹಕಾರಿ ಸಂಘ ದೊಡ್ಡ ಖಜಾನೆಯಾಗಿ ಬೆಳೆಯಲಿದೆ. ಪರಿಪೂರ್ಣ ಜ್ಞಾನ ಮತ್ತು ಪರಿಪಕ್ವತೆಯಿಂದ ಮಾತ್ರ ಸಹಕಾರ…

ಸುಳ್ಯ -ಪಾಣತ್ತೂರು ರಸ್ತೆಯ ಕಲ್ಲಪಳ್ಳಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರದಲ್ಲಿ ವ್ಯತ್ಯಯ.
ರಾಜ್ಯ

ಸುಳ್ಯ -ಪಾಣತ್ತೂರು ರಸ್ತೆಯ ಕಲ್ಲಪಳ್ಳಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರದಲ್ಲಿ ವ್ಯತ್ಯಯ.

ಸುಳ್ಯ ತಾಲೋಕಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ಕಲ್ಲಪಳ್ಳಿಯಲ್ಲಿ ಗುಡ್ಡದಿಂದ ಮಣ್ಣು ಕುಸಿದು ರಸ್ತೆ ಸಂಚಾರದಲ್ಲಿ ತಡೆ ಉಂಟಾಗಿರುವುದಾಗಿ ತಿಳಿದು ಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ…

ಐವರ್ನಾಡು : ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ
ರಾಜ್ಯ

ಐವರ್ನಾಡು : ಪ್ರಸನ್ನ ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

ಐವರ್ನಾಡಿನ ನೆಕ್ರಪ್ಪಾಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಗೌರಿಶಂಕರ ಸಿ.ಕೆಯವರ ಮಾಲಕತ್ವದ ಪ್ರಸನ್ನ ಕ್ಲಿನಿಕ್ ಐವರ್ನಾಡು ಮುಖ್ಯ ರಸ್ತೆ ಸಮೀಪ ನೂತನವಾಗಿ ನಿರ್ಮಾಣವಾದ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತಗೊಂಡು ಜು.06 ರಂದು ಶುಭಾರಂಭಗೊಂಡಿತು.ವಿಶ್ರಾಂತ ಪ್ರಾಂಶುಪಾಲರಾದ ಡಾ.ವಿಘ್ನೇಶ್ವರ ವರ್ಮುಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಪುರೋಹಿತ ಉದನೇಶ್ವರ ಭಟ್ ಮಂಜಳಗಿರಿ ಇವರು…

ವ್ಯಾಪಕ ಮಳೆ : ಜು.6 ರಂದು ಶಾಲಾ ಕಾಲೇಜುಗಳಿಗೆ ರಜೆ.
ರಾಜ್ಯ

ವ್ಯಾಪಕ ಮಳೆ : ಜು.6 ರಂದು ಶಾಲಾ ಕಾಲೇಜುಗಳಿಗೆ ರಜೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.6 ರಂದು ಜಿಲ್ಲೆಯ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ. ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಆಡಳಿತ ಸೂಚನೆ ನೀಡಿದೆ.

ರೈನ್‌ ಕೋಟ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ಸುಳ್ಯದ ಕುಂ ಕುಂ ಫ್ಯಾಶನ್‌.ಪ್ರತಿಷ್ಠಿತ ಕಂಪೆನಿ ರೈನ್ ಕೋಟ್ ಗಳ ಮೇಲೆ ಶೇ.30 ಡಿಸ್ಕೌಂಟ್‌ .
ರಾಜ್ಯ

ರೈನ್‌ ಕೋಟ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ಸುಳ್ಯದ ಕುಂ ಕುಂ ಫ್ಯಾಶನ್‌.ಪ್ರತಿಷ್ಠಿತ ಕಂಪೆನಿ ರೈನ್ ಕೋಟ್ ಗಳ ಮೇಲೆ ಶೇ.30 ಡಿಸ್ಕೌಂಟ್‌ .

ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು , ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಲು ಉತ್ತಮ ದರ್ಜೆಯ ರೈನ್‌ ಕೋಟ್‌ಗಳು ಅನಿವಾರ್ಯ . ರೈನ್ ಕೋಟ್ ಖರೀದಿದಾರರಿಗೆ ಅನುಕೂಲವಾಗುವಂತೆ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ (ಶೇ.30 ರಷ್ಟು) ರೈನ್‌ ಕೋಟ್‌ಗಳು ಲಭ್ಯವಿದೆ ಎಂದು…

ಮನೆಯ ಮೇಲೆ ಬಿದ್ದ ಬೃಹತ್ ಆಕಾರದ ಬೀಟೆ ಮರ: ಪ್ರಾಣಾಪಯದಿಂದ ಪಾರಾದ ಮನೆ ಮಾಲಕ:
ರಾಜ್ಯ

ಮನೆಯ ಮೇಲೆ ಬಿದ್ದ ಬೃಹತ್ ಆಕಾರದ ಬೀಟೆ ಮರ: ಪ್ರಾಣಾಪಯದಿಂದ ಪಾರಾದ ಮನೆ ಮಾಲಕ:

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು ಎಂಬಲ್ಲಿ ನಿರ್ಮಿಸುತ್ತಿದ ಹೊಸ ಮನೆಯ ಮೇಲೆ ಮರವೊಂದು ಉರುಳಿಬಿದ್ದು ಮನೆ ಸಂಪೂರ್ಣ ಜಖಂಗೊಂಡು ಮತ್ತು ಮನೆ ಮಾಲಕ ಓಡಿ ಪ್ರಾಣಾಪಯದಿಂದ ಪಾರಾದ ಘಟನೆ ಜು.5ರಂದು ವರದಿಯಾಗಿದೆ.ಬೊಳುಗಲ್ಲು ಬಾಲಚಂದ್ರ ಎಂಬವರು ನೂತನ ಮನೆ ನಿರ್ಮಿಸುತ್ತಿದ್ದು ಮನೆ ಪಕ್ಕದಲ್ಲಿದ್ದ ಮರವೊಂದು ಸುರಿಯುತ್ತಿರುವ ಭಾರೀ ಗಾಳಿಮಳೆಗೆ…

ವಾಹನ ಸವಾರರಿಗೆ ಕಗ್ಗಂಟ್ಟಾಗಿ ಪರಿಣಮಿಸಿದ ಕಲ್ಲಡ್ಕ ರೋಡ್ ನ ಸ್ಥಿತಿ: ರಸ್ತೆಯಲ್ಲಿ ನಿಂತ ನೆರೆ ನೀರು ದ್ವಿಚಕ್ರ ಪ್ರಯಾಣ ಇನ್ನಷ್ಟು ದುಸ್ತರ
ರಾಜ್ಯ

ವಾಹನ ಸವಾರರಿಗೆ ಕಗ್ಗಂಟ್ಟಾಗಿ ಪರಿಣಮಿಸಿದ ಕಲ್ಲಡ್ಕ ರೋಡ್ ನ ಸ್ಥಿತಿ: ರಸ್ತೆಯಲ್ಲಿ ನಿಂತ ನೆರೆ ನೀರು ದ್ವಿಚಕ್ರ ಪ್ರಯಾಣ ಇನ್ನಷ್ಟು ದುಸ್ತರ

ಬಂಟ್ವಾಳ: ಕಲ್ಲಡ್ಕ ಎಂದರೆ ಸದಾ ಸುದ್ದಿಯಲ್ಲಿರುವ ಸಿ.ಟಿ…ಈಗ ಅದೇನಪ್ಪಾ ಸುದ್ದಿ ಅಂತೀರಾ…..ಅದೇ ಮಾಮೂಲಿ ರಸ್ತೆ ಹೋಗಿ ಗದ್ದೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸಂಚಾರಕ್ಕೆ ಬದಲಿ ತಾತ್ಕಾಲಿಕ ವಾಗಿ ಸರ್ವೀಸ್ ರಸ್ತೆಗೆ ಹಾಕಿದ ಡಾಮರು ಕಿತ್ತುಹೋಗಿದೆ. ಸಂಚಾರಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು…

ಪೆರಾಜೆ‌ : ನಿಡ್ಯಮಲೆ – ಹಾಲೆಕಾಡು ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ‌ ನುಗ್ಗುವ ಆನೆಗಳ‌ ಹಿಂಡು : ಕೃಷಿ ನಾಶ – ಶಾಶ್ವತ ಪರಿಹಾರಕ್ಕೆ ಆಗ್ರಹ
ರಾಜ್ಯ

ಪೆರಾಜೆ‌ : ನಿಡ್ಯಮಲೆ – ಹಾಲೆಕಾಡು ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ‌ ನುಗ್ಗುವ ಆನೆಗಳ‌ ಹಿಂಡು : ಕೃಷಿ ನಾಶ – ಶಾಶ್ವತ ಪರಿಹಾರಕ್ಕೆ ಆಗ್ರಹ

ಪೆರಾಜೆ ಗ್ರಾಮದ ನಿಡ್ಯಮಲೆ - ಹಾಲೆಕಾಡು ಪ್ರದೇಶದಲ್ಲಿ ಕೃಷಿ ತೋಟಕ್ಕೆ ಆನೆಗಳ ಹಿಂಡು‌ಬಂದು ಕೃಷಿ‌ ಹಾನಿ ಗೊಳಿಸಿರುವ ಘಟನೆ ಜು.5 ರಂದು ವರದಿಯಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದ ಕೃಷಿಕರಾದ ಬೆಳ್ಳಿಪ್ಪಾಡಿ ತಿಮ್ಮಪ್ಪ, ಕುಡಿಯರ ಸುಂದರ, ಚಾಮಕಜೆ ಲಿಂಗಯ್ಯ, ಚಾಮಕಜೆ ದುಗ್ಗಪ್ಪ, ಚಾಮಕಜೆ ನಾರಾಯಣ, ಹೊದ್ದೆಟ್ಟಿ ಗೋಪಾಲಕೃಷ್ಣ,…

ನಿಂತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಪಿಕಪ್ ಚಾಲಕ : ಸೋಣಂಗೇರಿಯಲ್ಲಿ ಅಡ್ಡಗಟ್ಟಿದ ಪೋಲಿಸರು: ಪಿಕಪ್ ವಶಕ್ಕೆ.
ರಾಜ್ಯ

ನಿಂತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಪಿಕಪ್ ಚಾಲಕ : ಸೋಣಂಗೇರಿಯಲ್ಲಿ ಅಡ್ಡಗಟ್ಟಿದ ಪೋಲಿಸರು: ಪಿಕಪ್ ವಶಕ್ಕೆ.

ಸುಳ್ಯ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಗೆ ಪಿಕಪ್ ವಾಹನವೊಂದು ಗುದ್ದಿ, ಸ್ಕೂಟಿ ಚರಂಡಿಗೆ ಉರುಳಿಬಿದ್ದು ಪಿಕಪ್ ಚಾಲಕ ನಿಲ್ಲಿಸದೇ ಪರಾರಿಯಾದ ಘಟನೆಗೆ ಸಂಭಂದಿಸಿದಂತೆ ಪಿಕಪ್ ವಾಹನ ಮತ್ತು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ, ಜು.3 ರಂದು ಸಂಜೆ ಸುಳ್ಯದ ವಿದ್ಯಾನಗರದಲ್ಲಿ ಅಜ್ಜಾವರ ಗ್ರಾಮದ ಶಿವರಾಮ ಎಂಬವರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI