ಮೊಗರ್ಪಣೆ ಮಖಾಂ ಉರೂಸ್ ಸಮಾರಂಭ.ಪ್ರೀತಿ ಸ್ನೇಹಗಳ ಸಹಬಾಳ್ವೆಯ ಜೀವನವೇ ಶ್ರೇಷ್ಠ :ಹಾಫಿಲ್ ಮಶ್‌ಹೂದ್ ಸಖಾಫಿ ಗೂಡಲ್ಲೂರು.


ಸುಳ್ಯ ಮೊಗರ್ಪಣೆ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ ಮತ್ತು ಮೂರುದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮಫೆ 24ಕ್ಕೆ ಆರಂಭಗೊಂಡು ಫೆ 26ರಂದು ಸಮಾಪನಗೊಂಡಿತು.
ಫೆಬ್ರವರಿ 24ರಂದು ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ರವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸ್ಥಳೀಯ ,ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಅವರ ನೇತೃತ್ವದಲ್ಲಿ ದರ್ಗಾದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.

ಸಂಜೆ ಸ್ಥಳೀಯ ಮಸೀದಿ ಮುದರ್ರಿಸ್ ಹಾಗೂ ನೂರುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್, ಅಧ್ಯಾಪಕ ವೃಂದದವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕ ಸಾಮೂಹಿಕ ದುವಾ ಕಾರ್ಯಕ್ರಮ ನಡೆಯಿತು.
ರಾತ್ರಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಫಝಲ್ ಕೊಯಮ್ಮ ತಂಗಳ್ ಕೂರತ್ ರವರಿಂದ ಆಧ್ಯಾತ್ಮಿಕ ಕೀರ್ತನೆ ಮತ್ತು ದುವಾ ಸಂಗಮ ನಡೆಯಿತು. ಸಭಾ ವೇದಿಕೆಯನ್ನು ಅಸ್ಸಯ್ಯಿದ್ ಕುಂಞಿ ಕೋಯಾ ತಂಙಳ್ ಸಅದಿ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಪ್ರಭಾಷಣಕಾರರಾಗಿ ಖ್ಯಾತವಾಗ್ಮಿ ಕಬೀರ್ ಇಮಮಿ ಸಕಾಫಿ ಕಾಸರಗೋಡು ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬ ಮುಸಲ್ಮಾನನಿಗೆ ಅಲ್ಲಾಹನ ಆರಾಧನೆ ಕಡ್ಡಾಯವಾಗಿದ್ದು ಜೀವನದ ಬಹು ಮುಖ್ಯ ಅಂಗವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು. ವೇದಿಕೆಯಲ್ಲಿ ಪೈಚಾರು ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುನೀರ್ ಸಕಾಫಿ,ಅಧ್ಯಕ್ಷ ಟಿ ಎ ಶರೀಫ್, ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್ ಸಂಶುದ್ದಿನ್,ಮೊಗರ್ಪಣೆ ಮಸೀದಿ ಕಮಿಟಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಮಾಜಿ ಅಧ್ಯಕ್ಷರುಗಳಾದ ಹಾಜಿ ಪಳ್ಳಿಕುಂಞಿ, ಕೆ ಹಸ್ಸನ್ ಹಾಜಿ, ಹಾಲಿ ಸದಸ್ಯರಾದ ಅಬ್ದುಲ್ ಖಾದರ್ ಶಾಂತಿನಗರ, ಮುನೀರ್ ಹಳೆಗೇಟು, ಹಾಗೂ ಇನ್ನಿತರ ಧಾರ್ಮಿಕ ಪಂಡಿತರು, ಉಮರಾ ನೇತಾರರು ಉಪಸ್ಥಿತರಿದ್ದರು. ಎನ್ ಐ ಎಂ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ ಸ್ವಾಗತಿಸಿದರು.
ಫೆ.25ರಂದು ಮಗರಿಬ್ ನಮಾಜ್ ಬಳಿಕ ಉರೂಸ್ ಕಾರ್ಯಕ್ರಮದ ಅಂಗವಾಗಿ ಜಮಾತಿನ ಸದಸ್ಯರು ಹಾಗೂ ಮೊಗರ್ಪಣೆ ಶರಿಅತ್ ಕಾಲೇಜಿನ ವಿದ್ಯಾರ್ಥಿಗಳು ಪಠಿಸಿದ ಖತಂ ಕುರ್ ಆನ್, ಹಾಗೂ ತಹಲೀಲ್ ಸಮರ್ಪಣೆ ದುವಾ ಮಜ್ಲೀಸ್ ಹಾಫಿಲ್ ಸೌಕತ್ ಅಲಿ ಸಕಾಫಿರವರ ನೇತೃತ್ವದಲ್ಲಿ ನಡೆಯಿತು.
ಬಳಿಕ ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ವಾಗ್ಮಿ ಹಾಫಿಲ್ ಮಶ್‌ಹೂದ್ ಸಖಾಫಿ ಗೂಡಲ್ಲೂರು ಪ್ರಭಾಷಣ ಮಾಡಿ ಪೈಗಂಬರ್ ಮೊಹಮ್ಮದ್ ಅವರ ಮೇಲಿನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಬೇರೆ ಯಾವುದೇ ಇಲ್ಲ. ಸ್ನೇಹ ವಿಶ್ವಾಸದಿಂದ ಕೂಡಿದ ಜೀವನವೇ ಶ್ರೇಷ್ಠ ಎಂದು ಹೇಳಿದರು.
ವೇದಿಕೆಯಲ್ಲಿ ಹಾಫಿಲ್ ಸೌತ್ ಅಲಿ ಸಕಾಫಿ, ಶಾಂತಿನಗರ ಮದರಸ ಸದರ್ ಮುಅಲ್ಲಿಂ ಅಬ್ದುಲ್ ರಶೀದ್ ಝೈನಿ, ಮೊಗರ್ಪಣೆ ಮದರಸ ಮೊಅಲ್ಲಿಂರಾದ ಹಂಝ ಸಕಾಪಿ ಸಾಲೆತ್ತೂರು, ಮೂಸ ಮುಸ್ಲಿಯರ್, ನಾಸಿರ್ ಸಕಾಫಿ, ದಫ್ ಅಸೋಸಿಯೇಷನ್ ಅಧ್ಯಕ್ಷ ಡಿ ಇಬ್ರಾಹಿಂ, ಜಮಾತ್ ಕಮಿಟಿ ಉಪಾಧ್ಯಕ್ಷ ಸಿಎಂ ಉಸ್ಮಾನ್, ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್, ನಾವೂರು ಅನ್ಸಾರಿಯ ಜುಮಾ ಮಸೀದಿ ಖತಿಬರಾದ ಉಮರ್ ಮುಸ್ಲಿಯರ್ ಮರ್ದಾಳ, ಮೊದಲಾದವರು ಉಪಸ್ಥಿತರಿದ್ದರು.
ಜಯನಗರ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿದರು