
ಪುತ್ತೂರು: ಮಹಿಳೆಯೋರ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ.ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮಹಿಳೆ ನಬೀಸ ಎಂದು
ಗುರುತಿಸಲಾಗಿದೆ.ಈಕೆ ನ.25 ರಂದು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಎದುರು ಭಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ನಬೀಸ ಅವರು ಅಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.ಆದ್ರೆ ನಬೀಸ ಅವರೇ ಬೆಂಕಿ ಹಚ್ಚಿಕೊಂಡರೆ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೇ ಎನ್ನುವುದು ಇನ್ನೂ
ಸ್ಪಷ್ಟವಾಗಿಲ್ಲ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರು ಪತಿ ಇಬ್ರಾಹಿಂ ಹಾಗೂ ಮಕ್ಕಳನ್ನು ಅಗಲಿದ್ದಾರೆ.
add a comment