ರಾಜ್ಯ

ಯುವತಿಯೊಂದಿಗೆ ಅಸಭ್ಯ ವರ್ತನೆ : ಪ್ರಕರಣ ದಾಖಲು.

ವಿಟ್ಲ: ದ್ವಿಚಕ್ರ ವಾಹನ ಒಂದರಲ್ಲಿ ಬಂದ ಯುವಕನೋರ್ವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವರ ಮೈಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ.೧೩ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಕಸಬ ಗ್ರಾಮದ ಕಡಂಬು ನಿವಾಸಿ ಯುವತಿಯೋರ್ವರು ಮೇ.೧೩ರಂದು ಮಧ್ಯಾಹ್ನದ ವೇಳೆ ತನ್ನ ಮನೆಯಿಂದ ತರವಾಡು ಮನೆಗೆ ರಸ್ತೆ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ವೇಳೆ

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿಗೆ ತಲುಪಿದಾಗ ಅನಿಲಕಟ್ಟೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ಯುವತಿಯಲ್ಲಿ ವಿಟ್ಲಕ್ಕೆ ಹೋಗುವ ರಸ್ತೆಯ ಬಗ್ಗೆ ವಿಚಾರಿಸಿ ಬಳಿಕ ಯುವತಿಯ ಮೈಗೆ ಕೈ ಹಾಕಿ ಮಾನ ಭಂಗಕ್ಕೆ ಪ್ರಯತ್ನಿಸಿ ಅಸಭ್ಯವಾಗಿ‌ ವರ್ತಿಸಿರುವ ಬಗ್ಗೆ ಯುವತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Response

error: Content is protected !!