

ಕಡಬ : ನಿಮಗೆ ಪ್ರಧಾನ ಮಂತ್ರಿ ಮೋದಿ ಹಣ ತೆಗೆದುಕೊಡುತ್ತೇನೆ ಎಂದು ನಂಬಿಸಿ ಉಪ್ಪಿನಂಗಡಿ ಸಹಿತ ಹಲವು ಕಡೆ ಜನರಿಗೆ ಪಂಗನಾಮ ಹಾಕಿ ಹಣ, ಚಿನ್ನದ ಸರಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಾಸರಗೋಡಿನವನಾಗಿದ್ದು, ಉಪ್ಪಿನಂಗಡಿಯಲ್ಲಿ ಈ ಹಿಂದೆ ರಸ್ತೆ ಬದಿ ಬನಿಯನ್, ಟೀ ಶರ್ಟ್ ಮಾರುತ್ತಿದ್ದ ಎನ್ನಲಾಗಿದೆ.
ಈತ ಉಪ್ಪಿನಂಗಡಿಯಲ್ಲಿ ಹಲವು ಮಂದಿಯನ್ನು ನಿಮಗೆ ಮೋದಿಯ ಹಣ ತೆಗೆದುಕೊಡುತ್ತೇನೆಂದು ಮಾತಿನಲ್ಲಿ ಮೋಡಿ ಮಾಡಿ ಹಣ,ಚಿನ್ನದ ಸರಗಳನ್ನು ಅವರಿಂದಲೇ ಪಡೆದು ಬಳಿಕ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ಈತನ ಮಾತಿನ ಮೋಡಿಗೆ ಮರುಳಾಗಿ ಅನೇಕ ಜನ ಹಣ, ಸರ ಕಳೆದುಕೊಳ್ಳುತ್ತಿದ್ದರು. ಈ ಅರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ತನಿಖೆ ಮುಂದುವರೆದಿದೆ
add a comment