ರಾಜ್ಯ

ಚೆಂಬು ಕುದ್ರೆಪಾಯದಲ್ಲಿ ಉಸ್ಮಾನ್ ಕೊಲೆ ಪ್ರಕರಣ : ಆರೋಪಿಗಳು ಕೇರಳದಲ್ಲಿ ಸೆರೆ ..!

ಮಡಿಕೇರಿ ತಾಲೋಕಿನ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಆಸ್ತಿ ವಿವಾದಕ್ಕೆ ಸಹೋಧರನಿಗೆ ಚೂರಿ ಇರಿದು ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳು ಕೇರಳದಲ್ಲಿ ಸೆರೆ ಸಿಕ್ಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ, ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಕೊಲೆಯಾದ ಉಸ್ಮಾನ್ ಹಾಗೂ ಅವರ ಸಹೋದರರು ಹತ್ಯೆ ಆರೋಪಿಗಾಳಾಗಿದ್ದ ಸತ್ತಾರ್ ಮತ್ತು ರಫೀಕ್ ರವರು ಚೂರಿಯಿಂದ ಇರಿದು ರಿಕ್ಷಾದಲ್ಲಿ ಪರಾರಿಯಾಗಿದ್ದರು ಘಟನೆಗೆ ಸಂಭಂದಿಸಿ ಸಹಕರಿಸಿದ ರಿಕ್ಷಾ ಚಾಲಕನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು, ಆದರೆ ಆರೋಪಿಗಳು ನಾಪತ್ತೆಯಾಗಿದ್ದರು ಪೋಲಿಸರು ಆರೋಪಿಗಳ ಜಾಡು ಹಿಡಿದು ಶೋಧಕಾರ್ಯ ನಡೆಸಿದ್ದರು. ಆರೋಪಿಗಳು ಕೇರಳ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿತ್ತು ಈ ಹಿನ್ನಲೆ ತೀವ್ರ ಕಾರ್ಯಚರಣೆ ನಡೆಸಿದ ಪೋಲಿಸರು ಆರೋಪಿಗಳನ್ನು ಎರ್ನಾಕುಳಂ ಎಂಬಲ್ಲಿ ಸೆರೆ ಹಿಡಿದು ಕರೆದು ಕೊಂಡು ಬರುತ್ತಿದ್ದಾರೆ ಎಂದು ಆಪ್ತ ಮೂಲಗಳು ನ್ಯೂಸ್ ರೂಮ್ ಫಸ್ಟ್ ಗೆ ತಿಳಿಸಿದೆ

ಕೊಲೆಯಾದ ಎರಡೇ ದಿನದಲ್ಲಿ ಆರೋಪಿಗಳ ಹೆಡೆಮುರಿಗಟ್ಟಿದ ಪೋಲಿಸರು.!

ಘಟನೆ ನಡೆದ ಬಳಿಕ ಆರೋಪಿಗಳ ಮನೆಯವರ ಪೋನ್ ಆಲಿಕೆ ನಡೆಸುತ್ತಿದ್ದ ಸೈಬರ್ ಪೋಲಿಸರು ಆರೋಪಿಗಳು ತನ್ನ ಮನೆಯವರ ಜೊತೆ ಸಂಪರ್ಕಿಸುತ್ತಿದ್ದ ಜಾಡು ಹಿಡಿದು ಆರೋಪಿಗಳನ್ನು ಪತ್ತೆಗೆ ಕಾರ್ಯಾಚರಣೆ ನಡೆಸಿರಬಹುದು ಎನ್ನಲಾಗಿದೆ ಇನ್ನಷ್ಟು ಮಾಹಿತಿ ಪೋಲಿಸರಿಂದಲೇ ತಿಳಿದು ಬರಬೇಕಿದೆ.

Leave a Response

error: Content is protected !!