


ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ
ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗದ್ವಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ನಾಗ ಸಂಜೀವನ ನಡೆಯಿತು.ಸಂಜೆ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣವನ್ನು ಶ್ರೀ ಟಿ.ವಾಸುದೇವ ಆಚಾರ್ ಕಿಲಂಗೋಡಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಿಂಗಪ್ಪ ಗೌಡ ತಂಟೆಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿ|ಬಾಬು ಮಾಸ್ಟರ್ ರವರ ಪುತ್ರ ಶ್ರೀ ಕೃಷ್ಣ ಗೌಡ ಕೆಯ್ಯರು, ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ,ನಿವೃತ್ತ ಉಪನ್ಯಾಸಕರಾದ ಶ್ರೀ ಅನಂತ ಪದ್ಮನಾಭ ಗೋಪಾಲಕಜೆ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಕಿಲಂಗೋಡಿ, ಶ್ರೀ ಐತ್ತಪ್ಪ ಶೆಟ್ಟಿ ತಂಟೆಪ್ಪಾಡಿ ಭಾಗಿಯಾಗಿದ್ದರು. ನಿನಾದ ಸಾಂಸ್ಕೃತಿಕ
ಕೇಂದ್ರದ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದವರಿಂದ ನಾಗ ಸಂಜೀವನ ಯಕ್ಷಗಾನ ಬಯಲಾಟ ನಡೆಯಿತು.