ಕೇಂದ್ರ ಸರಕಾರ ಅಕ್ಕಿ ನೀಡದೆ ರಾಜ್ಯದ್ರೋಹ ಗ್ಯಾರಂಟಿ ವಿಫಲಗೊಳಿಸಲು ಮಾಡುವ ವ್ಯವಸ್ತಿತ ಹುನ್ನಾರ – ಕೆ.ಪಿ.ಸಿ.ಸಿ ಮುಖ್ಯವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಟೀಕೆ ಅರೋಪ


ರಾಜ್ಯದಲ್ಲಿ ಕಾಂಗ್ರೇಸ್ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯಯೋಜನೆಯನ್ನು ವಿಫಲಗೊಳಿಸುವ ಏಕೈಕ ಉದ್ದೇಶದಿಂದ ಕೇಂದ್ರ ಸರಕಾರ ಅಕ್ಕಿ ಪೂರೈಕೆಯನ್ನು ಸ್ಥಗಿತಗೊಳಿಸಿರುವುದನ್ನು ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಖಂಡಿಸಿದ್ದಾರೆ. ಭಾರತೀಯ ಆಹಾರ ನಿಗಮವು ಉದ್ದೇಶಿಸಿತ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ನಿಗದಿತ ದರದಲ್ಲಿ ಪೂರೈಸಲು ಅನುವುಮಾಡಿ ನೀಡಿದ್ದರು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯ ಸರಕಾರಗಳಿಗೆ ಪೂರೈಸುತ್ತಿರುವ ಅಕ್ಕಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಸ್ಥಗಿತಗೊಳಿಸಿರುವುದು ಕೇಂದ್ರ ಸರಕಾರದ ದ್ವೇಷದ ರಾಜಕೀಯವಾಗಿರುತ್ತದೆ, ಭಾರತೀಯ ಆಹಾರ ನಿಗಮದಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದ್ದರು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ನೀಡದೆ ಖಾಸಗಿಯವರಿಗೆ ನೀಡಲು ಮುಂದಾಗಿದೆ. ಇದು ಬಡವರಿಗೆ ಮಾಡುತ್ತಿರುವ ಮತ್ತು ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ. ಮಳೆಗಾಲ ಪ್ರಾರಂಭವಾಗಿ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ ಇಂತಹ ಸಂದರ್ಭದಲ್ಲಿ ಏಕಾಏಕಿ ಅಕ್ಕಿ ಸರಬರಾಜನ್ನು ನಿರಾಕರಿಸಿದ್ದನ್ನು ಕಾಂಗ್ರೇಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ, ಗ್ಯಾರಂಟಿ ಬಗ್ಗೆ ಒತ್ತಾಯಿಸಿ ಸಂಶಯ ಹಾಸ್ಯಸ್ಪದ ಮಾಡಿ ಪತ್ರಿಕಾ ಪ್ರಚಾರ ಪಡೆದ ವಿರೋಧ ಪಕ್ಷದವರು ಈ ಬಗ್ಗೆ ಗಮನ ಹರಿಸದ ಬಗ್ಗೆ ಮತ್ತು ಕೇಂದ್ರ ಸರಕಾರದ ಈ ನಡೆಗೆ ಟಿ.ಎಂ ಶಹೀದ್ ತೆಕ್ಕಿಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.