

ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಸುಳ್ಯ ವಿಧಾನಸಭಾ ಕ್ಷೇತ್ರ ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಸುಳ್ಯ ನಗರದ ಖಾಸಗಿ ಬಸ್ ತಂಗುದಾಣದಲ್ಲಿ ತಾಲೂಕು SVEEP ಸಮಿತಿ ಹಾಗೂ ಸುಳ್ಯ ನಗರಪಂಚಾಯತ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾರ್ವಜನಿಕರಿಗೆ ಆಯೋಗದಿಂದ ನೀಡಿದ ವಿವಿಧ ಮತದಾನ ಜಾಗೃತಿ ವಿಡಿಯೋ ಗಳನ್ನು ಪ್ರದರ್ಶನ ಮಾಡಲಾಯಿತು. ಮತದಾನ ಜಾಗೃತಿಗೆ ಸಂಬಂಧಿತ ಭಿತ್ತಿಪತ್ರ ಪತ್ರಗಳನ್ನು ಪ್ರದರ್ಶಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಯಿತು. ವೃತ್ತಾಕಾರದ ಮಾನವಸಂಕೋಲೆ ನಿರ್ಮಿಸಿ ಮತದಾನ ಜಾಗೃತಿಯ ಸಂದೇಶ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು SVEEP ಸಮಿತಿ ಅಧ್ಯಕ್ಷ ರಾದ ಶ್ರೀ ಭವಾನಿಶಂಕರ್, ಸಹಾಯಕ ಚುನಾವಣಾಧಿಕಾರಿ ಶ್ರೀ G.ಮಂಜುನಾಥ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, AD ಕೃಷಿ ನಾಗರಾಜ್, ಆರೋಗ್ಯ ಅಧಿಕಾರಿ ಪ್ರಮೀಳಾ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಜೀವಿನಿ ಒಕ್ಕೂಟದ MBK/LCRP, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


