

ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ ದಿನಾಂಕ 07.11.2023 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಹಕಾರಿಯ ಕಛೇರಿಗೆ ಹವಾನಿಯಂತ್ರಿತ ಯಂತ್ರವನ್ನು ಕೊಡುಗೆಯಾಗಿ ನೀಡಿದ ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಲ್ಲಿಕಾ ಸ್ಟಾಲ್ ಅಂಗಡಿಯ ಮಾಲಕರಾದ ತೊಡಿಕಾನ ಗ್ರಾಮದ ಬಾಳೆಕಜೆಯ ಶ್ರಿ ಬಾಲಕೃಷ್ಣ ಬಿ ವಿ ಇವರನ್ನು ಸನ್ಮಾನಿಸಲಾಯಿತು ಮತ್ತು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರಿ ಜನಾರ್ದನ ದೋಳ ಉಪಾಧ್ಯಕ್ಷರಾದ ಶ್ರೀ ಸತ್ಯನಾರಾಯಣ ಅಚ್ರಪ್ಪಾಡಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶ್ರಿ ಅಶ್ವತ್ ಬಿಳಿಮಲೆ ನಿರ್ದೇಶಕರಾದ ಶ್ರಿ ರಾಘವ ಗೌಡ ಮದುವೆಗದ್ದೆ, ಶ್ರೀ ಆನಂದ ಗೌಡ ಖಂಡಿಗ, ಶ್ರೀ ಸತೀಶ್ ಕೆ ಜಿ, ಶ್ರೀ ಸಚಿನ್ ಕುಮಾರ್ ಮಡಪ್ಪಾಡಿ, ಶ್ರೀ ಪ್ರಕಾಶ್ ಕೇರ್ಪಳ, ಶ್ರೀ ದೀಕ್ಷಿತ್ ಕುಮಾರ್ ಪಾನತ್ತಿಲ, ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಸಿಬ್ಬಂದಿ ಶ್ರೀಮತಿ ಲಿಖಿತಾ ಉಪಸ್ಥಿತರಿದ್ದರು.