ಸುಳ್ಯ ಜನತೆ ಬದಲಾವಣೆ ಬಯಸಿದ್ದಾರೆ: ಸುಳ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಆಮ್ ಆದ್ಮಿ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ: ಪ್ರದೀಪ್ ತುಮುಕೂರು.


ಸುಳ್ಯ ತಾಲೋಕಿನಾಧ್ಯಂತ ಒಡಾಟ ನಡೆಸಿದ್ದೇವೆ ಆದರೆ ನಾವು ಈ ಹಿಂದೆ ನೋಡಿದ ಸುಳ್ಯ ನಗರಕ್ಕೂ ಗ್ರಾಮಾಂತರ ಸುಳ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ , ಹಲವು ದಶಕಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿರುವವರು ರಸ್ತೆ , ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ , ಇದೀಗ ಆಮ್ ಆದ್ಮಿ ಪಕ್ಷದಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುವ ಸುಮನಾ ಬೆಳ್ಳಾರ್ಕರ್ ಶಾಸಕಿಯಾಗಿ ಆಯ್ಕೆಯಾದಲ್ಲಿ ಗ್ರಾಮಾಂತರ ಜನರ ಸಮಸ್ಯೆಗಳನ್ನು ಪರಿಹರಿಸಿಕೊಡುವ ಭರವಸೆ ಹೊಂದಿದ್ದೇವೆ ಎಂದು ಸುಮಾನಾ ಬೆಳ್ಳಾರ್ಕರ್ ಸಹಪಾಟಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದ ಅವರು ನಾವು ಸುಳ್ಯದಲ್ಲಿ ಎಂ.ಬಿ.ಎ ಪದವಿ ಪಡೆದಿದ್ದೇವೆ , ಸುಳ್ಯ ನಮ್ಮೂರು ಇದ್ದಂತೆ, ಆಮ್ ಆಧ್ಮಿ ಪಕ್ಷದ ಅಭ್ಯರ್ಥಿ ಸುಮನಾ ನಮ್ಮ ಸಹಪಾಠಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಷಯ ತಿಳಿದು ನಾವು ಇಲ್ಲಿ ಬಂದೆವು, ಆದರೆ ಅಂದು ನಾವು ನೋಡಿದ್ದ ಶಿಕ್ಷಣ ಕಾಶಿ ಸುಳ್ಯಕ್ಕೂ, ಸುಳ್ಯ ಗ್ರಾಮಾಂತರ ಪ್ರದೇಶಕ್ಕೂ ವ್ಯತ್ಯಾಸವಿದೆ, ಸುಮನಾ ವಿದ್ಯಾವಂತೆ ಮಾತ್ರವಲ್ಲ, ಬುದ್ದಿವಂತೆ, ಸುಳ್ಯಕ್ಕೆ ತನ್ನ ಸೇವೆ ನೀಡಲು ತನ್ನ ಹುದ್ದೆಯನ್ನು ತ್ಯಜಿಸಿ, ಬೆಂಗಳೂರು ಬಿಟ್ಟು ಇಲ್ಲಿ ಬಂದಿದ್ದಾರೆ, ಅವರ ಜನಪರ ಕಾಳಜಿ ನಾವು ಗಮನಿಸಿ ನಾವು ಅವರ ಬೆಂಬಲಿಗರಾಗಿ ಇಲ್ಲಿ ಬಂದೆವು, ಇಲ್ಲಿ 50 ವರ್ಷಗಳಿಂದ ವಾಸವಿದ್ದವರಿಗೆ ಹಕ್ಕುಪತ್ರ ಲಭಿಸಿಲ್ಲ,ಜನತೆ ಬದಲಾವಣೆ ಬಯಸಿದ್ದಾರೆ, ಗೆಲುವಿನ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಸುಮನ ಬೆಳ್ಳಾರ್ಕರ್ ಗೆಲ್ಲುವುದು ಅನಿವಾರ್ಯವಾಗಿದೆ, ಮತದಾರರು ವಿದ್ಯಾವಂತೆಗೆ ಮತನೀಡುವುದರ ಮೂಲಕ ಸುಳ್ಯದ ಅಭಿವೃದ್ದಿಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿಕೊಂಡರು.

ಸುದ್ದಿಗೋಸ್ಟಿಯಲ್ಲಿ, ಪ್ರದೀಪ್ ತುಮಕೂರು,ಲೋಹಿತ್ ಮದ್ದೂರು,ವಿಜಯ್ ಭಗವಾನ್ ತರೀಕೆರೆ, ವೇದರಾಜ್ ರಾಮನಗರ ಮೊದಲಾದವರಿದ್ದರು.
