ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ:ಮತಾಂತರ ನಿಷೇದ ಕಾಯ್ದೆ ವಾಪಸ್ ಪಡೆದು: ಪಠ್ಯ ಪರಿಷ್ಕರಣೆ ಮಾಡುವ ಮೂಲಕ ರಾಷ್ಟ್ರೀಯ ವಿಚಾರದಾರೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ: ಹರೀಶ್ ಕಂಜಿಪಿಲಿ.


ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ.ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯತೆಯ ಉಳಿವಿಗಾಗಿ ಪಠ್ಯಪುಸ್ತಕಗಳ ಪುನರಚನೆ ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರದ
ಅವಧಿಯಲ್ಲಿ ಮಾಡಿರುವ ಕಾಯ್ದೆ ಹಾಗೂ ಪಠ್ಯ ಪುಸ್ತಕ
ಪುನರಚನೆಯನ್ನು ವಾಪಸ್ ಪಡೆಯಲು ಹೊರಟಿರುವುದು ಮಾರಕವಾಗಿದೆ. ಇದನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತಿದ್ದು, ಕಾಯ್ದೆಗಳು ಈ ಹಿಂದೆ ಇದ್ದಂತೆ ಯಥವತ್ತಾಗಿ ಮುಂದುವರಿಯಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಗ್ರಹಿಸಿದ್ದಾರೆ .

ಅವರು ಜೂ. 17.ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಬಲವಂತದ ಮತಾಂತರ ಆಗಬಾರದೆನ್ನುವ ನಿಟ್ಟಿನಲ್ಲಿ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಹಿಂದುಗಳ ಭಾವನೆಗಳಿಗೆ ನೋವುಂಟಾಗುವ ಕೆಲಸ ಮಾಡುತ್ತಿದ್ದು, ಮುಸಲ್ಮಾನರ ಒಲೈಕೆಗೆ ಮುಂದಾಗಿದೆ ಸಮಾನತೆಯ ಪಾಠಮಾಡುವ ಕಾಂಗ್ರೇಸ್ ಅಧಿಕಾರಕ್ಕೆ ಬರುತಿದ್ದದಂತೆ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.

ಎ ಪಿ ಎಂಸಿ ಕಾಯ್ದೆತಿದ್ದುಪಡಿಯಿಂದ ಸ್ವತಂತ್ರವಾಗಿದ್ದ ರೈತರಿಗೆ ಮತ್ತೆ ಅನ್ಯಾಯ.
ಎಪಿಎಂಸಿ ಕಾಯ್ದೆಗೆ ತಿದ್ದು ಪಡಿಯಾದ ಪರಿಣಾಮ ರೈತರಿಗೆ ತುಂಬಾ ಅನೂಕಲವಿತ್ತು. ಮದ್ಯ ವರ್ತಿಗಳಿಲ್ಲದೇ ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಅವಕಾಶ ಇತ್ತು. ಆದರೆ ಇದೀಗ ವಾಪಸ್ ಪಡೆಯುವುದರ ಮೂಲಕ ಈಗಿನ ಸರಕಾರ ರೈತ ವಿರೋಧಿ ಹೆಜ್ಜೆಯಿಟ್ಟಿದೆ. ಐದು ಗ್ಯಾರಂಟಿ ಗಳನ್ನಿಟ್ಟು ಕಾಂಗ್ರೆಸ್ ಅಧಿಕಾರ ಬಂದಿದೆ. ಈಗ 1 ಗ್ಯಾರಂಟಿಯನ್ನಷ್ಟೇ ಜಾರಿ ಮಾಡಿದೆ. 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಈಗ ಕೇಂದ್ರ ಸರಕಾರವನ್ನು ದೂರುತ್ತಿದೆ. ಇವರು ಘೋಷಣೆ ಮಾಡುವಾಗ ಯೋಚನೆ ಮಾಡದೆ, ಈಗ ಕೇಂದ್ರವನ್ನು ದೂರುವುದು ಸರಿಯಲ್ಲ, ವಿದ್ಯುತ್ ದರ ಹೆಚ್ಚಿಸಿರುವ ಕಾಂಗ್ರೆಸ್ ಸರಕಾರ ಈಗ ಹೆಚ್ಚು ಮಾಡಿರುವ ದರವನ್ನು ತಕ್ಷಣ ಇಳಿಸಿ ಈ ಹಿಂದೆ ಇದ್ದಂತೆ ಮುಂದುವರಿ ಸಬೇಕೆಂದುಅವರು ಆಗ್ರಹಿಸಿದರು .
ಮೇನಾಲದಲ್ಲಿ ವಿವಾದಿತ ಜಾಗದಲ್ಲಿ ಉರೂಸ್ ನಡೆಸಲು ಅನುಮತಿ ನೀಡಿದ ಜಿಲ್ಲಾಡಳಿತದ ನಡೆಗೆ ಖಂಡನೆ.
ಅಜ್ಜಾವರದ ಮೇನಾಲದಲ್ಲಿ ಉರೂಸ್
ಕಾರ್ಯಕ್ರಮ ವನ್ನು ಮೇನಾಲ ಮಸೀದಿಯ ಪಕ್ಕದ
ಜಾಗದಲ್ಲಿ ಮಾಡಬಹುದು. ಮೇನಾಲ ಕುಟುಂಬಸ್ಥರಿಗೆ
ಸೇರಿದ ಮಸೀದಿಯ ಎದುರಿನ ಜಾಗ ವಿವಾದ
ಇರುವುದರಿಂದ ವಿವಾದ ಇತ್ಯರ್ಥ ಆಗುವ ತನಕ ಅಲ್ಲಿ
ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಹಿಂದೆ
ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೆ ಬದಲಾದ
ಸನ್ನಿವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿ ವಿವಾದಿತ ಜಾಗದಲ್ಲೇ ಉರೂಸ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಜಿಲ್ಲಾಡಳಿತದ ಈ ಕ್ರಮವನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.
ಮೇನಾಲದಲ್ಲಿ ಏಕಪಕ್ಷಿಯ ನಿರ್ಧಾರಗಳನ್ನು ಸರಕಾರ ಮಾಡುತ್ತಿದೆ,ಇದನ್ನು ನ್ಯಾಯಾಲಯದಲ್ಲಿ
ಪ್ರಶ್ನಿಸುತ್ತೇವೆ : ಸುಭೋದ್ ಶೆಟ್ಟಿ ಮೇನಾಲ.

ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳ ಅಭಿಪ್ರಾಯ ಪಡೆದ ಬಳಿಕ 155/2 ಸರ್ವೆ ನಂಬ್ರದಲ್ಲಿ ಅನುಮತಿ ಕೊಟ್ಟಿದ್ದರು. 155/1 ರಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಆ ಸಂದರ್ಭದಲ್ಲಿ ನಾವು ಕೂಡಾ ಆಕ್ಷೇಪ ಸಲ್ಲಿಸಿದ್ದೆವು. ಇದಾದ ೧೫ ದಿನ ಕಳೆದ ನಂತರ ಯಾವುದೇ ಅರ್ಜಿ ಇಲ್ಲದೇ, ನ್ಯಾಯಾಲಯದ ಅನುಮತಿ
ಇಲ್ಲದೆ ಮೊದಲು ಕೊಟ್ಟ ಅನುಮತಿಯನ್ನು ತಿದ್ದುಪಡಿ
ಮಾಡಿ ಪರಿಷ್ಕೃತ ಆದೇಶ ಮಾಡಿದ್ದು ವಿವಾದಿತ
ಜಾಗದಲ್ಲಿ ಅವಕಾಶ ನೀಡಿದ್ದಾರೆ.ಇದು ಏಕಪಕ್ಷಿಯ ನಿರ್ಧಾರ, ಕಾಂಗ್ರೆಸ್ ಸರಕಾರ ಹಾಗೂ
ಜನಪ್ರತಿನಿಧಿಗಳು ಇದನ್ನು ಮಾಡಿದ್ದಾರೆ. ಇದರಿಂದ
ಬಹುಸಂಖ್ಯಾತ ಹಿಂದುಗಳ ಭಾವನೆಗೆ
ನೋವುಂಟಾಗಿದ್ದು, ಇದನ್ನು ನ್ಯಾಯಾಲಯದಲ್ಲಿ
ಪ್ರಶ್ನಿಸುತ್ತೇವೆ ಎಂದು ಸುಭೋದ್ ಶೆಟ್ಟಿ ಮೇನಾಲ ಹೇಳಿದರು.

ಕೇರಳದಂತೆ ಇಲ್ಲಿಯೂ ರಬ್ಬರ್ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು, ಎಂದು ಮುಳಿಯ ಕೇಶವ ಭಟ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ , ವೆಂಕಟ್ ದಂಬೆಕೋಡಿ, ಶಿವಾನಂದ ಕುಕ್ಕುಂಬಳ,ವಿನಯ ಕುಮಾರ್
ಕಂದಡ್ಕ, ಸುನಿಲ್ ಕೇರ್ಪಳ, ಸುಪ್ರೀತ್ ಮೋಂಟಡ್ಕ, ಮಹೇಶ್ ರೈ ಮೇನಾಲ, ಪ್ರಸಾದ್ ಕಾಟೂರು ಮೊದಲಾದವರಿದ್ದರು