ರಾಜ್ಯ

ಸುಳ್ಯ:ಪೊಲೀಸ್ ಠಾಣಾಧಿಕಾರಿಯಾಗಿ ಈರಯ್ಯ ದೂಂತೂರು.
ಇವರು ಖಡಕ್ ಅಧಿಕಾರಿ ಮಾತ್ರವಲ್ಲ ಪುಸ್ತಕ ಪ್ರೇಮಿಯೂ ಹೌದು

: ಸುಳ್ಯ ಪೊಲೀಸ್ ಠಾಣಾಧಿಕಾರಿಯಾಗಿ ಈರಯ್ಯ ದೂಂತೂರು ಅವರನ್ನು ನೇಮಕ‌ ಮಾಡಿ ಸರಕಾರ ಆದೇಶ ಮಾಡಿದೆ.
ಎರಡು ವರ್ಷಗಳಿಂದ ಸುಳ್ಯದಲ್ಲಿ ದಿಲೀಪ್ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ 2014ನೇ ಬ್ಯಾಚ್‌ನ ಅಧಿಕಾರಿಯಾದ ಈರಯ್ಯ ದೂಂತೂರು ಅವರು ಸುಳ್ಯಕ್ಕೆ ನೇಮಕ ಗೊಂಡಿದ್ದಾರೆ. ಇನ್ನೂ ಇವರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಂದಾಪುರದಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಖಡಕ್ ಅಧಿಕಾರಿಯಾದ ಈರಯ್ಯ ದೂಂತೂರು ಕವಿ, ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ. ಇವರು ಮೂಲತಃ ಬೆಂಗಳೂರಿನವರು ಪ್ರಸ್ತುತ ಕುಂದಾಪುರದಲ್ಲಿದ್ದು ಇನ್ನೆರಡು ದಿನಗಳಲ್ಲಿ ಸುಳ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Response

error: Content is protected !!