ರಾಜ್ಯ

ಸುಳ್ಯಶಾಲಾ ಆವರಣದಲ್ಲಿದ್ದ ಮರಗಳನ್ನು ಆಸ್ಪತ್ರೆಯವರು ಕಡಿಸಿದ ಆರೋಪ: ವಿವಿಧ ಇಲಾಖೆಗಳಿಗೆ ದೂರು.

ಸುಳ್ಯ ಪಟ್ಟಣದ ಜ್ಯೋತಿ ಸರ್ಕಲ್ ಬಳಿ ಇರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮರಗಳನ್ನು ಕಡಿದು ನಾಶಮಾಡಿದ ಆರೋಗ್ಯ ಇಲಾಖೆ ವಿರುದ್ದ ಶಾಲೆಯ ಶಿಕ್ಷಕ ವೃಂದ ಗರಂ ಆಗಿ ಸಂಘಟನೆ ಮೊರೆ ಹೋದ ಘಟನೆ ವರದಿ ಯಾಗಿದೆ.ಸುಳ್ಯದ ಅತ್ಯಂತ ಹಳೆಯ ಕಾಲದ ಸಾವಿರಾರು ಗಣ್ಯಾತಿ ಗಣ್ಯರು ವಿದ್ಯಾಭ್ಯಾಸ ಮಾಡಿರುವ ಶಾಲೆಯ ಆವರಣದಲ್ಲಿ ಮರಗಳಿಗೆ ಕೊಡಲಿಯೇಟು ಬಿದ್ದಿದೆ, ಸರ್ವೆ ನಂ 204/2A1A1A ರಲ್ಲಿ ಬಿ.ಆರ್. ಸಿ ಕಟ್ಟಡದ ಪಕ್ಕದಲ್ಲಿರುವ ಶಾಲಾ ಜಾಗದಲ್ಲಿ ಇದ್ದ ಮರವನ್ನು ಸರಕಾರಿ ಆಸ್ಪತ್ರೆಯವರು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಕಡಿದಿದ್ದಾರೆ . ಎಂದು ಆರೋಪಿ ಶಾಲೆ ಶಿಕ್ಷಕ ವೃಂದ ಅರಣ್ಸ ಇಲಾಖೆ ಸುಳ್ಯ ತಾಹಶೀಲ್ಧಾರ್ ಅವರಿಗೆ ಮನವಿ ಮಾಡಿದ್ದರು, ಈ ಸಂದರ್ಭದಲ್ಲಿ ತಾಹಶೀಲ್ಧಾರ್ ಪರಿಶೀಲಿಸುವ ಭರವಸೆ ನೀಡಿದ್ದರು.ಆದರೆ ಇಲಾಖಾ ಮಟ್ಟದಲ್ಲಿ ಯಾವುದೇ ರೀತಿ ಸ್ಪಂದನೆ

ದೊರೆಯದಿದ್ದಾಗ ಶಾಲ ಶಿಕ್ಷಕ ವೃಂದ ಕ್ಕೆ ಕಂಡು ಬಂದಿದ್ದು ಸುಳ್ಯದ ಅಂಭೇಡ್ಕರ್ ರಕ್ಷಣಾ ವೇದಿಕೆ , ಹಾಗಾಗಿ ಶಿಕ್ಷರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ ಮಾಡಿ ಶಾಲಾ ಆವರಣದಲ್ಲಿ ಇದ್ದ ಮರಗಳನ್ನು ಕಡಿದು ಹಾಕಿರುವ ಸರಕಾರಿ ಆಸ್ಪತ್ರೆಯ ಅವರ ಕ್ರಮದ್ದ ವಿರುದ್ಧ ಇಲಾಖಮಟ್ಟದವರ ಗಮನ ಹರಿಸಿ ಶಾಲೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಮನವಿ ಸ್ವೀಕಾರ ಮಾಡಿರುವ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಅದ್ಯಕ್ಷ. ಸುಂದರ್ ಪಾಠಾಜೆ ಕಾನೂನು ಹೋರಾಟದ ಮೂಲಕ ಸರ್ವೆ ಮಾಡಿಸಿಕೊಡಿಸುವ ಭರವಸೆ ನೀಡಿದ್ಧಾರೆ. ಒಟ್ಟಿನಲ್ಲಿ ಎರಡು ಸರಕಾರಿ ಇಲಾಖೆಗಳ ನಡುವಿನ ತಾಕಲಾಟಕ್ಕೆ ಅನ್ಯಾಯವಾಗಿ ಮರಗಳು ನಾಶವಾಗಿ ಖಾಸಾಗಿ ವ್ಯಕ್ತಿಯ ಪಾಲಾಯಿತು, ಕಡಿದು ಹಾಕಲಾದ

ಮರಗಳನ್ನು ರಾತ್ರೋರಾತ್ರಿ ಕೊಂಡೊಯ್ಯಲಾಗಿದೆ.

Leave a Response

error: Content is protected !!