ಸುಳ್ಯ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕೆ ಮತ್ತು ರಬ್ಬರ್ ನೆಲಹಾಸು ವಿತರಣೆ.


ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿ ಗೋ ಶಾಲೆ ನಿರ್ಮಾಣವಾಗಲಿ : ಭಾಗೀರಥಿ ಮುರುಳ್ಯ.

ಕನ್ನಡ ಜಿಲ್ಲಾ ಪಂಚಾಯತ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಆಶ್ರಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ರಬ್ಬರ್ ನೆಲಹಾಸು ವಿತರಣೆ ಉಚಿತ ರೇಬಿಸ್ ಲಸಿಕೆ ಕಾರ್ಯಕ್ರಮ ಉದ್ಘಾಟನೆ ಹಾಗೂ ದಕ್ಷಿಣ ಪಶು ಸಖಿಯರಿಗೆ ಕಿಟ್ ವಿತರಣೆ ಸುಳ್ಯದ ಪಶು ಆಸ್ಪತ್ರೆಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕಿ ಗೋ ಶಾಲೆಯ ಅಭಿವೃದ್ದಿ ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿ ಆಗಬೇಕು, ಸಾಕು ಪ್ರಾಣಿಗಳ ನೋವಿಗೆ ಪಶವೈದ್ಯಾಧಿಕಾರಿಗಳು ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಬೇಕು. ಸಾಕು ಪ್ರಾಣಿಗಳನ್ನು ಸಾಕಲು ಕಷ್ಟವಾದರೆ ಪಶುಪಾಲನಾ ಆಸ್ಪತ್ರೆಯಲ್ಲೇ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಬಳಿಕ ಆಸ್ಪತ್ರೆಯ ಮೂಲಭೂತ ಸೌಕರ್ಯ ಮತ್ತು ಆಂಬುಲೆನ್ಸ್ ಸೌಕರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಡಾ .ನಿತಿನ್ ಪ್ರಭು, ಡಾ. ನಾಗರಾಜ್ , ಡಾ. ಸೂರ್ಯ ನಾರಾಯಣ ಬಿಕೆ , ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷಪ್ಪರಾಜ್ ಶೆಟ್ಟಿ, ಡಾ. ವೆಂಕಟಾಚಲಪತಿ , ಸಿಬ್ಬಂದಿ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

