ರಾಜ್ಯ

ಡಿ .8 ರಂದು ಸುಳ್ಯದಲ್ಲಿ ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಲಿ ಇದರ 5 ನೇ ಶಾಖಾ ಕಛೇರಿ ಉದ್ಘಾಟನೆ.

ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಲಿ ಪುತ್ತೂರು ಇದರ ಐದನೇ ಶಾಖೆಯಾಗಿ ಸುಳ್ಯ ಶಾಖೆ ಜನ ಸೇವೆಗೆ ಲಭ್ಯವಾಗಲಿದೆ .ಎಂದು ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿ ಮಾತನಾಡಿ ಡಿ. 8 ರಂದು ಸುಳ್ಯದ ಖಾಸಾಗಿ ಬಸ್ ನಿಲ್ದಾಣದ ಸಮೀಪ ಯೂನಿಯನ್ ಬ್ಯಾಂಕ್ ಬಳಿಯ ರಾಜಾರಾಮ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಕಚೇರಿ ಸಿದ್ದಪಡಿಸಿದ್ದು, ಬಂದರು ಮೀನುಗಾರಿಕೆ ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಶಾಖೆಯನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅದ್ಯಕ್ಷತೆಯನ್ನು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಇದರ ಅದ್ಯಕ್ಷ ಸಂತೋಷ್ ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ನಗರ ಪಂಚಾಯತ್ ಅದ್ಯಕ್ಷ ವಿನಯಕುಮಾರ್ ಕಂದಡ್ಕ ,


ಸಹಕಾರ ರತ್ನ ಸವಣೂರು ಸೀತರಾಮ ರೈ, ಸಹಕಾರ ಸಂಘಗಳ ಉಪ ನಿಬಂಧಕ ಎಚ್ ಎನ್ ರಮೇಶ್, ಹಿರಿಯ ಸಹಕಾರಿ ಪಿ ಬಿ ದಿವಾಕರ ರೈ. ವೆಂಕಟ್ರಮಣ ಕ್ರೆಡಿಟ್ ಕೊ ಒಪರೇಟಿವ್ ಸೊಸೈಟಿ ಅಧ್ಯಕ್ಷ ಪಿ ಸಿ ಜಯರಾಮ, ಮಹಿಳಾ ವಿವಿಧ್ದೋದ್ದೇಶ ಸಹಕಾರಿ ಸಂಘದ ಅದ್ಯಕ್ಷ ರಾಜೀವಿ ಆರ್ ರೈ.ಕ್ರೈಸ್ತ ಅಲ್ಪಸಂಖ್ಯಾತರ ಸಹಕಾರಿ ಸಂಘದ ಬಿಟ್ಟಿ ಬಿ ನೆಡುನಿಲಮ್, ಉದ್ಯಮಿ ಲಯನ್ಸ ಎಂ ಬಿ ಸದಾಶಿವ, ಅಲ್ಪಸಂಖ್ಯಾತರ. ಸಹಕಾರಿ ಸಂಘದ ಸ್ಥಾಪಕ ಅದ್ಯಕ್ಷ ಎಸ್ ಎಮ್ ಭಾಪೂ ಸಾಹೇಬ್, ಉದ್ಯಮಿ ಆದಮ್ ಕುಂಞಿ ಕಮ್ಮಾಡಿ, ಆಲೆಟಿ ಸಹಕಾರಿ ಸಂಘದ ನಿರ್ಧೇಶಕ ಸುಧಾಕರ ಕಟ್ಟಡ ಮಾಲಕರು ಕೃಷ್ಣ ರಾವ್, ಪರಿವಾರ ಬಂಟರ ಸಂಘದ ಸುಳ್ಯ ತಾಲೋಕು ಅಧ್ಯಕ್ಷ ಪಿ ಕೆ ವಿಠಲ್ ಮೊದಲಾದವರು ಭಾಗವಹಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂತನ ಠೇವಣಿ ಪತ್ರಗಳ ಬಿಡುಗಡೆ, ನೂತನ ಉಳಿತಾಯ ಖಾತೆಗಳ ಬಿಡುಗಡೆ, ಸಾಲ ಪತ್ರಗಳ ಬಿಡುಗಡೆ ಮೊದಲಾದ ಕಾರ್ಯಕ್ರಮಗಳನ್ನು ಈಸಂದರ್ಭದಲ್ಲಿ ಮಾಡಲಾಗುವುದು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ನಿರ್ದೇಶಕರಾದ ರಘುನಾಥ್ , ಕೊಡಂಗೆ ಬಾಲಕೃಷ್ಣ, ರತ್ನಾಕರ್, ಸಲಹಾ ಸಮಿತಿ ಅದ್ಯಕ್ಷ ಸತ್ಯಕುಮಾರ್ ಆಡಿಂಜ, ಶಾಖಾ ವ್ಯವಸ್ಥಾಪಕ ಪ್ರೀತಮ್ ಎನ್ ಮೊದಲಾದವರಿದ್ದರು.

Leave a Response

error: Content is protected !!