ರಾಜ್ಯ

ಸೆ.16 ರಂದು ಸುಳ್ಯದಲ್ಲಿ 10 ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ.

ಸೆ.16 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ. ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಸ್ಥಾಪನಾ ದಿನಾಚರಣೆಯ ಅಂಗವಾಗಿ ೧೦ ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ,ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥರಾಮ ಕುಂಚಡ್ಕ, ಹಾಗೂ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೂಮಶೇಖರ ಪೈಕ ತಿಳಿಸಿದ್ದಾರೆ, ಅವರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿ ಮಾತನಾಡಿ,ಕಳೆದ ಹತ್ತು ವರ್ಷಗಳಿಂದ ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಈ ಬಾರೀ ವಿಶೇಷವಾಗಿ ಮೆರವಣಿಗೆಯಲ್ಲಿ ಹುಲಿವೇಷ, ಸಿಡಿಮದ್ದು ಪ್ರದರ್ಶನ ನಡೆಯಲಿದೆ, ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ, ಮೊಸರು ಕುಡಿಕೆ ಸ್ಪರ್ಧಾಕಾರ್ಯಕ್ರಮದಲ್ಲಿ ಹಿಂದೂ ಬಾಂಧವರನ್ನು ಒಳಗೊಂಡ ಹಲವು ತಂಡಗಳು ಭಾಗವಹಿಸಲಿದ್ದು , ಪ್ರಥಮ ಬಹುಮಾನ ೧೫೦೦೦ ಮತ್ತು ಶಾಶ್ವತ ಫಲಕ, ದ್ವಿತೀಯ ೧೦೦೦೦ ಮತ್ತು ಶಾಶ್ವತ ಫಲಕ , ಹಾಗೂ ತೃತೀಯ ೭೦೦೦ ಹಾಗೂ ಶಾಶ್ವತ ಫಲಕ ಒಳಗೊಂಡಿದ್ದು ಸ್ಪರ್ಧೆಯ ಕೊನೆಯ ವರೆಗೂ ಭಾಗವಹಿಸುವ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ, ಭಾಗವಹಿಸುವ ತಂಡಗಳು ಹೆಸರು ನೋಂದಾವಣೆ ಮಾಡಲು ಅವಕಾಶವಿದೆ ಎಂದು ಹೇಳಿದರು,


ಬಜರಂಗದಳ ಸಂಯೊಜಕ್ ಹರಿಪ್ರಸಾದ್ ಎಲಿಮಲೆ, ಮಾತನಾಡಿ ಸೆ ೧೬ ರ ಮದ್ಯಾಹ್ನ 2 ಗಂಟೆಗೆ ಶೋಭಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಲಿದ್ದು, ಖ್ಯಾತ ವ್ಯಾಗ್ಮಿ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥರಾಮ ಕುಂಚಡ್ಕ ಅಧ್ಯಕ್ಷತೆ ವಹಿಸಲಿದ್ದು, ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ,ಸ್ವದೇಶಿ ಗೋ ಸಂರಕ್ಷಕ ಕೆ ವಿಶ್ವನಾಥ್ ಪೈ ಐವರ್ನಾಡು, ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಸ್ಟಿಯಲ್ಲಿ, ಮೊಸರು ಕುಡಿಕೆ ಉತ್ಸವ ಶೋಭಾಯಾತ್ರೆಯ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಉಪಾಧ್ಯಕ್ಷ ರಜತ್ ಅಡ್ಕಾರು, ಸನತ್ ಚೊಕ್ಕಾಡಿ ಬಾನುಪ್ರಕಾಶ್ ಪೆಲ್ತಡ್ಕ , ಬಾನುಪ್ರಕಾಶ್ ಪೆರುಮುಂಡ,ನವೀನ್ ಎಲಿಮಲೆ,ವರ್ಷಿತ್ ಚೊಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.

Leave a Response

error: Content is protected !!