ರಾಜ್ಯ

ಸುಳ್ಯ ಲಾಡ್ಜ್‌ವೊಂದರಲ್ಲಿ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ಆರೋಪ ,
ವಿಶ್ವ ಹಿಂದೂ ಪರಿಷತ್ ಸಂಘಟನೆಯ ಮುಖಂಡರ ದೂರು ,ಪೊಲೀಸ್ ದಾಳಿ !

ಸುಳ್ಯ: ಸುಳ್ಯ ನಗರದ ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ನಿನ್ನೆ ಸಂಜೆ ಸುಳ್ಯ ಪೊಲೀಸರು ಹಾಗೂ ಹಿಂದು ಸಂಘಟನೆಯ ಮುಖಂಡರು ಲಾಡ್ಜ್ ಗೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.

ಲಾಡ್ಜ್ ನಲ್ಲಿ ಮೊದಲಿನಿಂದಲೇ ವೇಶ್ಯಾವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಸುಳ್ಯ ನಗರ ಕಾರ್ಯಕರ್ತರಿಗೆ ತಿಳಿದಿದ್ದು, ಇದರ ಸತ್ಯಾ ಸತ್ಯತೆಯನ್ನು ತಿಳಿಯಲು ಸಂಘಟನೆಯವರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದ್ದು ತಮ್ಮದೇ ಸಂಘಟನೆಯ ಓರ್ವ ಕಾರ್ಯಕರ್ತನನ್ನು ಲಾಡ್ಡಿಗೆ ಗ್ರಾಹಕರಂತೆ ಕಳುಹಿಸಿ ಬಳಿಕ ಲಾಡ್ಜ್ ನಲ್ಲಿ ಹುಡುಗಿಯರ ಬಗ್ಗೆ ಕೇಳಿದಾಗ ಸ್ಥಳಕ್ಕೆ ಇಬ್ಬರು ಯುವತಿಯರು ಬಂದಿದ್ದು, ಕೂಡಲೆ ಸಂಘಟನೆಯ ಕಾರ್ಯಕರ್ತ ತಮ್ಮ ಸಂಘಟನೆಯ ಮುಖಂಡರಿಗೂ ಮತ್ತು ಸುಳ್ಯ ಪೊಲೀಸರಿಗೂ ಮಾಹಿತಿಯನ್ನು ರವಾನಿಸಿದ್ದು ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸರು ಲಾಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಪುತ್ತೂರು ಮೂಲದ ಇಬ್ಬರು ಯುವತಿಯರನ್ನು ಮತ್ತು ಲಾಡ್ಜ್ ಮಾಲಕರನ್ನು ಠಾಣೆಗೆ ಕರೆದೋಯ್ದು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಸಂಜೆ ಆರು ಗಂಟೆಯ ವೇಳೆಗೆ ಈ ದಾಳಿ ನಡೆದಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರು ಲಾಡ್ಜ್ ನ ಕೆಳಭಾಗದಲ್ಲಿ ಜಮಾವಣೆಗೊಂಡಿದ್ದರು ಎನ್ನಲಾಗಿದೆ.

Leave a Response

error: Content is protected !!