

ಕಾರ್ಮಿಕರ ಪ್ರತಿಭಟನೆ: ಮಾತುಕತೆ ಬಳಿಕ ಪ್ರತಿಭಟನೆ ಹಿಂತೆಗೆತ:
ಸುಳ್ಯದ ಗುರುಂಪುನಲ್ಲಿ ಮಾ.25 ರ ಮಧ್ಯಾಹ್ನ ಗುಡ್ಡ ಜರಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ವಿಜಯ ಇಂಜಿನಿಯರ್ ಹಾಗೂ ಮನೆ ಮಾಲಿಕರ ಅಬುಬಕ್ಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ ಈ ಸಂದರ್ಭ ಕಾರ್ಮಿಕ ಮುಖಂಡರು ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದು

ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕರು ಪೋಲಿಸ್ ಠಾಣೆ ಎದುರು ಜಮಾಯಿಸಿ ಮೃತ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹ ವ್ಯಕ್ತಪಡಿಸಿ ಒಂದು ಹಂತದಲ್ಲಿ ಈ ಎಲ್ಲಾ ಬೆಳವಣಿಗೆ ವಿಕೋಪಕ್ಕೆ ಹೋಗುವ ಸನ್ನಿವೇಶ ಉಂಟಾಗಿತ್ತು, ಸಂಜೆ ವೇಳೆ ಕೆಲಸ ಮಗಿಸಿ ಬಂದ ಕಾರ್ಮಿಕರು ಠಾಣೆಯೆದುರು ಜಮಾವಣೆಯಾಗತೊಡಗಿತು, ರಾತ್ರಿ ಸುಮಾರು ೯ ಗಂಟೆ ವೇಳೆಗೆ ಇಂಜಿನಿಯರ್ ಮತ್ತು ಮನೆ ಮಾಲಿಕರು ಜಂಟಿಯಾಗಿ ಮೃತಪಟ್ಟ ಮನೆಯವರಿಗೆ ತಲಾ 2.5 ಲಕ್ಷ ಪರಿಹಾರ ನೀಡಲು ಒಪ್ಪಿಗೆ ನೀಡಿ ತಲಾ 50000 ತಕ್ಷಣ ಪರಿಹಾರ ನೀಡಲು ಬದ್ದರಾದರು.ಇದರಿಂದ ಕಾರ್ಮಿಕ ಮುಖಂಡರು ಹಾಗೂ ಮೃತಪಟ್ಟ ಶಾಂತಾ ಹಾಗೂ ಸೂಮಶೇಖರ್ ಸಂಬಂಧಿ ಸಮ್ಮತಿ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ, ಅಲ್ಲದೇ ಸರಕಾರದಿಂದ ಪರಿಹಾರ ನೀಡಲಾಗುವುದು ಇದರ ಮಾಹಿತಿಯನ್ನು ಅಧಿಕಾರಿಗಳು ತಿಳಿಸುತ್ತಾರೆ ಎಂದು ಸಚಿವ ಅಂಗಾರರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ ಅಲ್ಲದೆ ಕಾರ್ಮಿಕ ಮಂಡಳಿಯಿಂದ ಪರಿಹಾರ ಕೊಡಿಸುವಂತೆ ಪ್ರಯತ್ನ ಪಡಲಾಗುವುದು ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ, ಮಾತುಕೆಯಲ್ಲಿ ವಕೀಲ ಜಗದೀಶ, ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಭಾರತೀಯ ಮಜ್ಧೂರ್ ಸಂಘದ ಮದುಸೂಧನ, ಕಾರ್ಮಿಕ ಮುಖಂಡ ಮಂಜು, ಸಂದೀಪ್ ಮಹಾಲಕ್ಷ್ಮಿ ರಂಜಿತ್ , ಸೇರಿದಂತೆ ಹಲವರು ಭಾಗವಹಿಸಿದ್ದರು ಮಾತುಕತೆ ಬಳಿಕ ಮೂವರ ಮೃತದೇಹ ಗದಗಕ್ಕೆ ಕೊಂಡೊಯ್ಯುವುದಾಗಿ ಮೃತರ ಮನೆಯವರು ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿದ್ದಾನೆ ಮೃತ ದಂಪತಿಗಳ ಪುತ್ರ.
ಮೃತಪಟ್ಟ ಸೋಮಶೇಖರ ಮತ್ತು ಶಾಂತ ದಂಪತಿಗಳ ಹಿರಿಯ ಪುತ್ರ ಕಾಲೇಜು ವಿದ್ಯಾರ್ಥಿಯಾಗಿದ್ದು, ಮುಂಡರಗಿಯಲ್ಲಿದ್ದಾನೆ ಕಿರಿಯ ಪುತ್ರ ಸುಳ್ಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದು ಸುಳ್ಯ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿ .ಇನ್ನೂ ಮೂರು ದಿನಗಳ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು ಬಾಲಕನನ್ನು ಆತನ ಸಂಬಂಧಿಕರು ಊರಿಗೆ ಕರೆದೊಯ್ದ, ಪರೀಕ್ಷೆ ಬರೆಯವ ಸಲುವಾಗಿ ಮತ್ತೆಮರಳಿ ಸುಳ್ಯಕ್ಕೆ ಕರೆತರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
