ಕರ್ನಾಟಕದ ಸಮಗ್ರ ಅಭಿವೃದ್ಧಿ: ಕೃಷಿಕರ, ಯುವಕರ ಅಸಂಘಟಿತ ಕಾರ್ಮಿಕರ,ಮಹಿಳೆಯರ ಅಭ್ಯುದಯಕ್ಕೆ ಕಾಂಗ್ರೇಸ್ ಪ್ರಣಾಳಿಕೆ.


ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಣಾಳಿಕೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನಾಗಿಸಿದ್ದು, ಕೃಷಿಕರಿಗೆ, ಯುವಕರಿಗೆ, ಅಸಂಘಟಿತ ಕಾರ್ಮಿಕರಿಗೆ,ಮಹಿಳೆಯರಿಗೆ, ಸರ್ಕಾರಿ ನೌಕರರಿಗೆ ಬಹುತೇಕ ಎಲ್ಲಾ ವರ್ಗದ ಜನರಿಗೆ ಉಪಯೋಗ ಆಗಬಲ್ಲದ್ದಾಗಿದೆ ಅಲ್ಲದೆ ಭ್ರಷ್ಟಚಾರ ಕಾಯ್ದೆಗೆ ಕಠಿಣ ನಿಯಮಗಳ ಜಾರಿ, ನಿಯಂತ್ರಣ ಕ್ರಮಗಳ ಪಾರದರ್ಶಕತೆ ಹಾಗೂ ಲೋಕಾಯುಕ್ತ ಬಲವರ್ಧನೆಗೆ ಒತ್ತು ನೀಡುವ ಮೂಲಕ ರಾಜ್ಯದಲ್ಲಿ ಉತ್ತಮ ಯೋಜನೆಯನ್ನು ಕಾಂಗ್ರೇಸ್ ಈ ಬಾರಿ ಹಾಕಿಕೊಂಡಿದೆ ಎಂದು ಕಾಂಗ್ರೇಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿ ಬಿಜೆಪಿಯವರು ನಮ್ಮ ಪ್ರಣಾಳಿಕೆಯನ್ನು ತಿರುಚಿ ಜನರನ್ನು ಕೆರಳಿಸುವ ಯತ್ನ ಮಾಡುತ್ತಿದೆ, ಭಜರಂಗದಳ ನಿಷೇದ ಮಾಡುವ ಯಾವುದೇ ಹೇಳಿಕೆ ಪ್ರಣಾಳಿಕೆಯಲ್ಲಿ ಇಲ್ಲ, ಪ್ರಣಾಳಿಕೆಯಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು
ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು
ಕಾಂಗ್ರೆಸ್ ಪಕ್ಷ ಬದ್ಧವಾಗಿದೆ: ಸಂವಿಧಾನವೇ ಪವಿತ್ರ ಎಂದು ನಂಬುವ ನಾವು ಯಾವುದೇ ವ್ಯಕ್ತಿಗಳಾಗಲಿ
ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ
ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು
ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು , ಎಂಬ ಅಂಶ ಪ್ರಣಾಳಿಕೆಯದ್ದು ಇದೀಗ ಪ್ರಣಾಳಿಕೆಗೆ ವಿರೋಧ ಮಾಡುವವರು ಸಂವಿದಾನ ವಿರೋಧಿಕೃತ್ಯ ಮಾಡದಿದ್ದಲ್ಲಿ ಆಯಿತಲ್ವಾ, ಮತ್ತು ಈಗ ವಿರೋದಿಸುವವರು ಸಂವಿಧಾನ ವಿಧಿಗಳನ್ನು ವಿರೋಧಿಸುವವರು ಎಂದಾಯಿತು ಎಂದು ಪ್ರಣಾಳಿಕೆಗೆ ವಿರೋದಿಸುವವರನ್ನು ಟೀಕಿಸಿದರು.

ಕಾಂಗ್ರೇಸ್ ಈ ಬಾರಿ ಎಲ್ಲಾ ವರ್ಗದ ಜನರನ್ನು ಮನದಲ್ಲಿಟ್ಟು ಕೊಂಡು
ಏಕಗವಾಕ್ಷಿ ಏಜನ್ಸಿ ಮೂಲಕ ಅರ್ಜಿ ಸಲ್ಲಿಸುವ ಎಲ್ಲರಿಗೂ ಅರ್ಜಿ ಸಲ್ಲಿಸಿದ 3 ತಿಂಗಳ ಒಳಗಾಗಿ ಅನುಮತಿ
ಅಥವಾ ಅರ್ಜಿ ತಿರಸ್ಕೃತವಾದರೆ ಅದರ ಸ್ಥಿತಿಗತಿ ಮತ್ತು ಕಾರಣಗಳನ್ನು ತಿಳಿಸುವ ವ್ಯವಸ್ಥೆ.
ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋದಿತ ಹುದ್ದೆಗಳ ಭರ್ತಿಯನ್ನು ಒಂದು ವರ್ಷದೊಳಗೆ
ಮಾಡಲಾಗುವುದು.
ಮಹಿಳಾ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಕಠಿಣ ಕ್ರಮದ ತಿದ್ದುಪಡಿ.
ಭಯೋತ್ಪಾದನೆ, ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಯಂತ ಹೇಯ ಕೃತ್ಯಗಳ ಶೀಘ್ರ ತೀರ್ಮಾನಕ್ಕೆ ವಿಶೇಷ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ.
ಕೃಷಿ ಸರ್ವೋದಯ ನಿಧಿಃ ಮುಂದಿನ ಐದು ವರ್ಷಗಳಲ್ಲಿ ಕೃಷಿ ಆಧುನೀಕರಣ, ಸಬ್ಸಿಡಿ ಸಾಲ ಹಾಗೂ ವಿಮೆಗಳಿಗೆ 1.50 ಲಕ್ಷ ಕೋಟಿ ವಿನಿಯೋಗ.ಪ್ರತೀ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪನೆ.
ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷ ರೂಪಾಯಿಗೆ ಏರಿಕೆ. 3% ಬಡ್ಡಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷದ ವರೇಗೆ ವಿಸ್ತರಣೆ.
ಕೃಷಿ ಉತ್ಪನ್ನ ಕ್ಷೇತ್ರಗಳಲ್ಲಿ ಹೊಸ ಕೈಗಾರಿಕೆಗಳ ಸ್ಮಾರ್ಟ್ ಆಫ್ ಪ್ರೋತ್ಸಾಹಿಸಲು 500 ಕೋಟಿಗಳ ಸಾಲ ನಿಧಿ. ಮಹಿಳೆಯರು ಪ್ರಾರಂಭಿಸಲು ಬಯಸುವ ಉದ್ದಿಮೆಗಳಿಗೆ 200 ಕೋಟಿ ರೂಪಾಯಿ ಹೂಡಿಕೆ.
ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ವಿದ್ಯುತ್‌ನ್ನು ಹಗಲು ಹೊತ್ತಿನಲ್ಲಿ 8 ಗಂಟೆಗಳು ನೀಡುವ ಭರವಸೆ,ಪ್ರತೀ ಜಿಲ್ಲೆಗೆ ಒಂದರಂತೆ ರೈತ ಮಾಲ್‌ಗಳ ರಚನೆ.ಗ್ರಾಮೀಣ ಕೃಷಿಕ ಮಹಿಳೆಯರಿಗಾಗಿ ಸ್ವ-ಸಹಾಯ ಗುಂಪುಗಳಿಗೆ ರೂ. 3 ಲಕ್ಷದ ವರೇಗೆ ಬಡ್ಡಿರಹಿತ ಸಾಲ.ರಬ್ಬರ್ ಕೃಷಿಗಾಗಿ ರೂ. 25 ಕೋಟಿಯ ಪ್ಯಾಕೇಜ್. ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆ ತಿದ್ದುಪಡಿ.
ಕ್ಷೀರಧಾರೆ : ಪ್ರತೀ ಲೀಟರ್ ಹಾಲಿನ ಸಬ್ಸಿಡಿಯನ್ನು ರೂ. 5 ರಿಂದ ರೂ. 7ಕ್ಕೆ ಏರಿಕೆ.
ಕ್ಷೀರಕ್ರಾಂತಿ ಕ್ರೆಡಿಟ್ ಕಾರ್ಡ್ ರೂ. 50,000 ಕ್ರೆಡಿಟ್ ಮಿತಿಯೊಂದಿಗೆ ಎಲ್ಲಾ ಕೃಷಿಕರಿಗೆ ಕ್ರೆಡಿಟ್ ಕಾರ್ಡ್.
ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲದೆ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಬಡ್ಡಿ ರಹಿತ ಸಾಲ. ಮೀನುಗಾರಿಕೆಗೆ ಪ್ರೋತ್ಸಾಹ, ಮೀನುಗಾರಿಕೆ ಮಹಿಳೆಗೆ 3 ಲಕ್ಷ ಬಡ್ಡಿ ರಹಿತ ಸಾಲ, ಆಳಸಮುದ್ರ ಮೀನುಗಾರಿಕೆಗೆ 500 ಲೀಟರ್ ಡೀಸಲ್ ತೆರಿಗೆ ಮುಕ್ತ, ಮೀನುಗಾರಿಕೆ ನಿಷೇಧ ಸಮಯದಲ್ಲಿ ಎಲ್ಲಾ ಮೀನುಗಾರರಿಗೆ
ತಿಂಗಳಿಗೆ 6,000 ಒದಗಿಸಲು ಕ್ರಮ. ಮೀನುಗಾರಿಕಾ ಕ್ಷೇತ್ರದಲ್ಲಿ ಕನಿಷ್ಟ 10 ಲಕ್ಷ ಉದ್ಯೋಗ ಸೃಷ್ಟಿ20. ರೈತರಿಗೆ ತಮ್ಮ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ಇರುವ ತೊಡರುಗಳ ನಿವಾರಣೆ, ಸ್ಮಾರ್ಟ್ ಆಫ್ ನಿಧಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರೂ. 10 ಕೋಟಿ ನೀಡಿಕೆ.
ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸುವ ರೆಸ್ಟೋರೆಂಟ್, ಹೊಟೇಲ್, ಫುಡ್ ಟ್ರಕ್ ಹೋಮ್
ಸ್ಟೇಗಳನ್ನು ಸ್ಥಾಪಿಸುವವರಿಗೆ ಶೇ. 5ರ ಬಡ್ಡಿ ದರದಲ್ಲಿ ಸಾಲ.ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ 50 ಟ್ಯಾಕ್ಸಿಗಳಿಗೆ ಪರವಾನಿಗೆ ಮತ್ತು ಶೇ 5%ರ ಬಡ್ಡಿ ದರದಲ್ಲಿ ಸಾಲ.
ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಅನುದಾನಿತ ಶಾಲೆ, ಕಾಲೇಜುಗಳ ಖಾಲಿ ಇರುವ ಎಲ್ಲಾ ಶಿಕ್ಷಕರ ಮತ್ತು ಭೋದಕೇತರ ಹುದ್ದೆಗಳಿಗೆ ಒಂದು ವರ್ಷದೊಳಗೆ ನೇಮಕಾತಿ, ಪಿಯುಸಿ ಯಿಂದ ಉನ್ನತ ಶಿಕ್ಷಣದ ವರೇಗೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಪ್ಯಾಡ್, ಡಿಜಿಟಲ್ ನೋಟ್‌ಪ್ಯಾಡ್.
ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಕಾಯಂಗೊಳಿಸುವುದಕ್ಕೆ ಸೂಕ್ತ ಯೋಜನೆ.
ದೈಹಿಕ ಮತ್ತು ಮಾನಸಿಕ ವಿಕಲಚೇತನರಿಗೆ ಹತ್ತು ವಿಶೇಷ ವಸತಿ ಶಾಲೆಗಳ ಆರಂಭ.
ವಿದ್ಯಾಸಿರಿ ಬಿ.ಪಿ.ಎಲ್. ವಿದ್ಯಾರ್ಥಿಗಳ ಸ್ಟೈಪಂಡ್ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ.
ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂಧಿಯ ಖಾಲಿಹುದ್ದೆ ಭರ್ತಿ.
ಎಲ್ಲಾ ವಸತಿ ರಹಿತರಿಗೂ ವಸತಿ ಸೌಲಭ್ಯ,
ಬಡವರ ವಸತಿ ಯೋಜನೆಗಳಿಗೆ ಸಬ್ಸಿಡಿ 3 ಲಕ್ಷಕ್ಕೆ ಹೆಚ್ಚಳ.ಗ್ರಾಮ ಪಂಚಾಯತ್‌ಗೆ ತಲಾ 1 ಕೋಟಿ ಅನುದಾನ.ಪ್ರತೀ ಹೋಬಳಿಯಲ್ಲಿ ಒಂದೊಂದು ಬಾಬಾಸಾಹೇಬ್ ಅಂಬೇಡ್ಕರ್ ಇಂಗ್ಲೀಷ್ ಮಾಧ್ಯಮ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸ್ಥಾಪನೆ.ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ವಾರ್ಷಿಕ 500 ಕೋಟಿ.
ಅಡಿಕೆ ಹಳದಿ ರೋಗ ಹಾಗೂ ಇತರ ರೋಗಗಳ ನಿಯಂತ್ರಣ ಹಾಗೂ ಮಾರುಕಟ್ಟೆ ಸಂಶೋಧನೆಗೆ ಕ್ರಮ.1837ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟದ ಅಮರ ಸುಳ್ಯ ರೈತ ಸ್ವಾತಂತ್ರ್ಯ ಹೋರಾಟದಸವಿನೆನಪಿಗೆ ಸುಳ್ಯದಲ್ಲಿ ಭವನ ನಿರ್ಮಾಣಕ್ಕೆ ಸ್ಥಳ ನೀಡಿಕೆ ಹಾಗೂ ಭವನ ನಿರ್ಮಾಣಕ್ಕೆ 50 ಕೋಟಿ
ಅನುದಾನ ಹಾಗೂ 100 ಕೋಟಿ ಮೀಸಲು.
ಮಲೆನಾಡಿನ ರೈತರಿಗೆ ಅನಾನುಕೂಲವಾಗಿರುವ ಕಸ್ತೂರಿ ರಂಗನ್ ವರದಿಯ ಪರಿಶೀಲನೆ ಹಾಗೂ ಅರಣ್ಯಮತ್ತು ಪರಿಸರ ರಕ್ಷಣೆಗೆ ಪಶ್ಚಿಮಘಟ್ಟ ನೀತಿ.ಆದಿ ದ್ರಾವಿಡ ಮತ್ತು ಮೊಗೇರ ಮತ್ತು ಇತರ ಸಮುದಾಯಗಳ ಮೂಲ ಸ್ಥಾನಗಳ ಅಭಿವೃದ್ಧಿ.
ಇದಲ್ಲದೆ ಕಾಂಗ್ರೆಸ್ ಪಕ್ಷ ಈಗಾಗಲೇ ಘೋಷಿಸಿದ 5 ಗ್ಯಾರಂಟಿಗಳಾದ 200 ಯುನಿಟ್ ವಿದ್ಯುತ್ ಫ್ರೀ, 2000ರೂ ಪ್ರತೀ ತಿಂಗಳು ಮನೆಯ ಯಜಮಾನಿಗೆ ನೀಡುವ ಸಹಾಯಧನ, ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿ, ಯುವ ನಿಧಿ ಪದವೀಧರ ನಿರುದ್ಯೋಗ ಯುವಕರಿಗೆ 3000 ರೂ ಹಾಗೂ ಡಿಪ್ಲೋಮ ನಿರುದ್ಯೋಗಿಗಳಿಗೆ 1500 ರೂ ಸ್ಪೆಪಂಡ್ ಹಾಗೂ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿಯಲ್ಲಿ ಉಚಿತ ಪ್ರಯಾಣ ಕಾರ್ಯಕ್ರಮಗಳು ಸರಕಾರ ಬಂದ ಪ್ರಥಮ ಕ್ಯಾಬಿನೆಟ್‌ನಲ್ಲಿ ಅನುಸ್ಥಾಪನೆಗೊಳ್ಳಲಿದೆ ಎಂದು ಹೇಳಿದರು.ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ.ಸಿ ಜಯರಾಮ ಮಾತನಾಡಿ ಕಾಂಗ್ರೇಸ್ ಈಗ ಯಾವುದೇ ಗೊಂದಲವಿಲ್ಲದೆ ಪ್ರಚಾರ ಕಾರ್ಯ ಮಾಡುತ್ತಿದ್ದು, ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ತಿಳಿದು ಬಂದಿದೆ, ಜನರು ಬದಲಾವಣೆ ಬಯಸಿದ್ದಾರೆ, ಕಳೆದ 28 ವರ್ಷಗಳಿಂದ ಸೌಕರ್ಯ ವಂಚಿತ ತಾಲೋಕಿನ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ, ಬಹುಮತದೊಂದಿಗೆ ಕಾಂಗ್ರೇಸ್ ಗೆಲುವು ಸಾಧಿಸಲಿದೆ ಎಂದರು
ಸುದ್ದಿಗೋಷ್ಠಿಯಲ್ಲಿ, ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಮಹಿಳಾ ಕಾಂಗ್ರೇಸ್ ಅದ್ಯಕ್ಷೆ ಗೀತಾ ಕೊಲ್ಚಾರ್ ಮೊದಲಾದವರು ಉಪಸ್ಥಿತರಿದ್ದರು.
