

ಸುಳ್ಯ ನಗರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವೆಗಳು ಕಾರಣಾಂತರಗಳಿಂದ ತಾತ್ಕಾಲಿಕ ನಿಲುಗಡೆಯಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಪರಿಗಣಿಸಿ ತಾಲೂಕು ಪಂಚಾಯತ್ ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಆರಂಭಗೊಂಡಿದ್ದು, ವಿಳಾಸ ತಿದ್ದುಪಡಿ, ಹೆಸರು ತಿದ್ದುಪಡಿ, ಮೊಬೈಲ್ ನಂಬರ್ ಸೇರ್ಪಡೆ, ಹೊಸ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಅಪ್ಲೇಟ್ ಸೇವೆಗಳು ಲಭ್ಯವಿರುತ್ತದೆ. ತಿದ್ದುಪಡಿಗಾಗಿ ಸಂಬಂಧಪಟ್ಟ ಮೂಲ ದಾಖಲೆಗಳೊಂದಿಗೆ ಆಧಾರ್ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಈ ಬಗ್ಗೆ ತಮ್ಮ ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಲೂ ಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ್ ತಿಳಿಸಿದ್ದಾರೆ.
add a comment