ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ: ಆರೋಪಿಗಳ ಹೆಡೆಮುರಿಗಟ್ಟಿದ ಸುಬ್ರಹ್ಮಣ್ಯ ಪೋಲಿಸರು

ಸುಬ್ರಹ್ಮಣ್ಯ ಯಾತ್ರಾರ್ಥಿಯ ಕಾರಿನಿಂದ ಕಳವು ಪ್ರಕರಣ ದಾಖಲಾದ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣಾಅಧಿಕಾರಿ ಕಾರ್ತಿಕ್ ಹಾಗೂ ಮುರಳಿಧರ ನಾಯಕ್, ಕರುಣಾಕರ ಹಾಗೂ ಸಿಬ್ಬಂಧಿಗಳ ಎರಡು ತಂಡ ರಚಿಸಿ
ಆರೋಪಿಯನ್ನು ಸುಭ್ರಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಪ್ರಭಾಕರ ಹೊನ್ನವಳ್ಳಿ ಎಂಬ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತಾಧಿಯೋರ್ವರ ಕಾರಿನ ಗಾಜು ಒಡೆದು ಕಳ್ಳತನ ನಡೆದಿದ್ದು.
ಕೆ.ಎಲ್ 60 ಎನ್ 4003 ಕಾರಿನಲ್ಲಿ ಸುಬ್ರಹ್ಮಣ್ಯ ಕ್ಕೆ ಬಂದು ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ದೇವಸ್ಥಾನಕ್ಕೆ ಹೋಗಿ ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಕಾರಿನ ಬಳಿ ಬಂದು ನೋಡಿದಾಗ, ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಕಾರಿನಲ್ಲಿದ್ದ ಎರಡು ಬ್ಯಾಗ್ ಗಳನ್ನು ಯಾರೋ ಕಳ್ಳರು ತೆಗೆದುಕೊಂಡು ಹೋಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು,

ಸುಬ್ರಹ್ಮಣ್ಯ ರೈಲ್ವೆ ಸ್ಟೇಷನ್ ಅಲ್ಲಿ ಆರೋಪಿ ಪ್ರಭಾಕರ ಹೊನ್ನವಳ್ಳಿಯನ್ನು  ಬಂದಿಸಿದ ಸುಬ್ರಹ್ಮಣ್ಯ ಪೊಲೀಸ್
ಠಾಣಾ ಅಧಿಕಾರಿ ಕಾರ್ತಿಕ್ ಅವರ ನೇತೃತ್ವದಲ್ಲಿ ಮುರಳಿಧರ್ (ತನಿಖೆ )ರೊಂದಿಗೆ
ಠಾಣಾ ಸಿಬ್ಬಂದಿಗಳಾದ -ಕರುಣಾಕರ, ಮಹೇಶ್, ಕುಮಾರ್, ಆನಂದ್, ವಿಠ್ಠಲ್ ಬಸವರಾಜ್, ರೋಹಿತ್, ಕೃಷ್ಣ,ಎರಡು ತಂಡ ರಚಿಸಲಾಗಿತ್ತು!!

ಈತನ ಮೇಲೆ ಹೊನ್ನವಳ್ಳಿ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕಾರಣಗಳಿದ್ದು ದೇವಸ್ಥಾನ ಗಳಿಗೆ ಹೋಗಿ ಉಪಾಯದಿಂದ ಯಾರು ಇಲ್ಲದ ಸಮಯ ನೋಡಿಕೊಂಡು ಲೋಹದಂತ ಆಯುಧಗಳನ್ನು ಬಳಸಿ ಕಾರಿನ ಗಾಜುಗಳನ್ನು ಪುಡಿ ಮಾಡಿ ಬೇಲೆ ಬಾಳುವ ವಸ್ತುಗಳನ್ನು ಕದಿಯೋ ಚಾಳಿ ಬೆಳೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಕಳವಾಗಿರುವ ಬ್ಯಾಗ್ ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಆಧಾರ ಕಾರ್ಡ್ ,ಎಟಿಎಂ, ಇತ್ತೆದು ಈ ಬಗ್ಗೆ ಕೇರಳ ನಿವಾಸಿ ಸುಯಿಶ್‌ ಟಿ ಸಿ ಎಂಬವರ ದೂರಿನಲ್ಲಿ ಹೇಳಿದ್ದಾರೆ.

ಸುಬ್ರಹ್ಮಣ್ಯ ಪೊಲೀಸ್ರ ತಂಡ ತಕ್ಷಣ ಎರಡು ತಂಡಗಳನ್ನು ಮಾಡಿ ಆರೋಪಿಯನ್ನು ಬಂಧಿಸಿ ಸುಳ್ಯ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ,
ಮಂಗಳೂರು ಜೈಲಿಗೆ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದಕ್ಷ ಪೊಲೀಸ್ ಅಧಿಕಾರಿಗಳ ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

Leave a Response

error: Content is protected !!