

ಕುಕ್ಕೆ ಸುಬ್ರಹ್ಮಣ್ಯ ದರ್ಪಣ ತೀರ್ಥ ನದಿ ಮಲೀನವಾಗಿದ್ದು..ಸಾವಿರಾರು ಮೀನುಗಳು ಸತ್ತು ತೇಲುತ್ತಿದೆ.

ಇಡೀ ಸುಭ್ರಹ್ಮಣ್ಯದ ಒಳಚರಂಡಿ ಶೌಚಾಲಯದ ನೀರು ನದಿಗೆ ಹರಿಯ ಬಿಡಲಾಗಿದ್ದು, ಈ ಕಾರಣಕ್ಕಾಗಿಯೇ ಜಲಚರಗಳು ಸತ್ತು ತೇಲುವಂತಾಗಿದೆ.ಎನ್ನುವ ಆರೋಪ ಕೇಳಿ ಬಂದಿದೆ.

ಸಂಪೂರ್ಣ ಕಲುಷಿತಗೊಂಡ ದರ್ಪಣ ತೀರ್ಥ -ಮತ್ತೆ
ಇದೇ ನೀರು ಕುಮಾರಧಾರ ನದಿಗೆ ಸೇರುತ್ತದೆ. ನದಿನೀರು ಕಲುಷಿತ ವಾಗಿದೆ, ನೀರು ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ, ಎಂಬುದರ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಕಳೆದವಾರವಷ್ಟೇ ವರದಿ ಮಾಡಿತ್ತು ಆದರೂ ದೇವಾಲಯದ ಆಡಳಿತ ಮಂಡಳಿಯಾಗಲಿ, ಪಂಚಾಯತ್ ರವರಾಗಲಿ ,ಆಡಳಿತ ವರ್ಗವಾಗಲಿ ,ಯಾರು ತಲೆಕೆಡಿಸಿ ಕೊಳ್ಳದೆ ಉಡಾಪೆಯಾಗಿ ವರ್ತಿಸಿದ್ದ ಕಾರಣಕ್ಕೆ ಇಂದು ಜಲಚರಗಳು ಜೀವ ಕಳೆದುಕೊಳ್ಳುವಂತಾಗಿದೆ,ಇದೀಗ ಈ ವರದಿ, ಹಾಗೂ ದೃಶ್ಯ ನೋಡಿದ ಮೇಲಾದರು ಎಚ್ಚೆತ್ತು ಕೊಳ್ಳುತಾರೋ ಕಾದು ನೊಡುವಂತಾಗಿದೆ, ಈ ಬಗ್ಗೆ ಸುಭ್ರಹ್ಮಣ್ಯ ಪರಿಸರದವರೂ ಗಮನಹರಿಸಬೇಕಾಗಿದ್ದು, ಹೀಗೆ ಬಿಟ್ಟಲ್ಲಿ ಕುಮಾರಧಾರಾ ನದಿಯಲ್ಲಿನ ಜಲಚರಗಳ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ,
ಇದೀಗ ಮೀನು ಸತ್ತು ಅಕ್ಕಪಕ್ಕದ ಮನೆಗಳಿಗೆ ವಾಸನೆ ಬಡಿಯುತ್ತಿದೆ ಇದುವರೆಗೂ ಇತ್ತ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂಬ ಕೂಗು ಸ್ಥಳೀಯರದ್ದು.

ಶಿವ ಭಟ್ , ನ್ಯೂಸ್ ರೂಮ್ ಫಸ್ಟ್ ವರದಿ ಸುಬ್ರಹ್ಮಣ್ಯ.