ರಾಜ್ಯ

ಸುಬ್ರಹ್ಮಣ್ಯ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ಇದರ ವತಿಯಿಂದ ಪ್ರತಿಭಟನೆ!! ಉಡುಪಿ ಖಾಸಗಿ ಕಾಲೇಜಿನಲ್ಲಿ ನಡೆದ ಹೇಯ ಕ್ರತ್ಯವನ್ನು ಖಂಡಿಸಿ ಸಮಗ್ರ ತನಿಖೆಯನ್ನು ನಡೆಸುವಂತೆ ಆಗ್ರಹ.


ಅಖಿಲ ಭಾರತೀಯ ವಿದ್ಯಾ ಪರಿಷತ್ ಸುಬ್ರಹ್ಮಣ್ಯ ಸುಮಾರು 200ರಷ್ಟು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ
ಈಗಾಗಲೇ ರಾಷ್ಟ್ರದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಖಾಸಗಿ ಕಾಲೇಜಿನಲ್ಲಿ ಕೆಲ ಯುವತಿಯರು ಶೌಚಾಲಯವನ್ನು ಬಳಸುವ ವಿಡಿಯೋವನ್ನು ಒಂದು ಸಮುದಾಯದ ಯುವತಿಯರು ಅವರು ಕ್ರತ್ಯ ಎಸಗಿ ಅದನ್ನು ಇನ್ನೊಂದು ಕೋಮಿನವರೊಂದಿಗೆ ಹಂಚಿಕೊಂಡು ಹಿಂದೂ ವಿದ್ಯಾರ್ಥಿನಿಯಾರನ್ನು ಜಿಹಾದ್ ನ ಬಲೆಗೆ ಸಿಕ್ಕಿಸುವ ಆತಂಕಕಾರಿ ಘಟನೆ ಸದ್ದು ಮಾಡುತ್ತಿದೆ,
ಆದ್ದರಿಂದ ಪೊಲೀಸ್ ಇಲಾಖೆ ಸೂಕ್ತ ರೀತಿಯ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕೆಂದು, ಎ ಬಿ ವಿ ಪಿ ಅಗ್ರಹಿಸಿದ್ದಾರೆ,


ಘಟನೆಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಗಮನಿಸಿ ಇಂಥ ಘಟನೆಯು ಇತರೆ ಕಾಲೇಜಿನಲ್ಲಿ ಮರುಕಳಿಸದಂತೆ ಇದಕ್ಕೆ ಜಿಲ್ಲೆಯ ಪ್ರತಿ ಕಾಲೇಜಿನಲ್ಲೂ ಈ ಕುರಿತು ಅರಿವು ಮೂಡಿಸುವುದು ಮತ್ತು ಇಂಥ ಘಟನೆಯನ್ನು ವರದಿ ಮಾಡಲು ಪ್ರತೀ ಕಾಲೇಜಿನಲ್ಲೂ ಒಂದು ವಿಶೇಷ ಸೆಲ್ ಮಾಡುವಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು ಮತ್ತು ಇದನ್ನು ಗಮನಿಸಲು ಜಿಲ್ಲಾ ಮಟ್ಟದ ಒಂದು ತಂಡವನ್ನು ಸಹ ರಚಿಸಬೇಕು, ಎಂದು ಎ ಬಿ ವಿ ಪಿ ಆಗಹಿಸಿದೆ, ಈಗಾಗಲೇ ಮಾಧ್ಯಮಗಳಲ್ಲಿ ಬಂದಂತೆ ತಮಾಷೆಗಾಗಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದೇವೆ ಎಂಬ ತೀರ ಬಾಲಿಷ ಹಾಗೂ ಪ್ರಕರಣವನ್ನು ದಾರಿತಪ್ಪಿಸುವ ಹೇಳಿಕೆಯಾಗಿದೆ, ಶೌಚಾಲಯದ ಚಿತ್ರೀಕರಣ ಮಾಡುವಂತ ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಂಡು ಇದರ ಹಿಂದಿರುವಂತ ಷಡ್ಯಂತರವನ್ನು  ಬಯಲಿಗೆಳೆಯಬೇಕು ಎಂದು ಇಂದು ಸುಬ್ರಹ್ಮಣ್ಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆಯನ್ನು ನಡೆಸಿ ಮನವಿ ಪತ್ರವನ್ನು ಸುಬ್ರಮಣ್ಯ ಠಾಣಾಧಿಕಾರಿ ಮಂಜುನಾಥ್ ಅವರಿಗೆ ನೀಡಿದರು.

Leave a Response

error: Content is protected !!