ರಾಜ್ಯ

ಡಿ. 12 ರಂದು ಪೆರಾಜೆ ಕಲ್ಚೆರ್ಪೆ ಸಿರಿಕುರಲ್ ನಗರದ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ- ಗುಳಿಗ ದೈವದ ಕೋಲ.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪೆರಾಜೆ ಸಮೀಪದ ಕಲ್ಚೆರ್ಪೆ ಸಿರಿಕುರಲ್ ನಗರದಲ್ಲಿ ಡಿ.12 ರಂದು ಶ್ರೀ ವನದುರ್ಗಾ ರಕೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ
ವನದುರ್ಗಾ ರಕೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ಕೋಲವು ನಡೆಯಲಿದೆ ಎಂದು ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಗೋಕುಲ್‌ದಾಸ್ ಹೇಳಿದ್ದಾರೆ ಅವರು ಇಂದು
ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ಡಿ.12 ರಂದು ಬೆಳಿಗ್ಗೆ ಗಂಟೆ 7.30ರಿಂದ ಬಿ.ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ತಂತ್ರಿವರ್ಯರ ನೇತೃತ್ವದಲ್ಲಿ ಸ್ಥಳ ಶುದ್ದಿ, ಗಣಹೋಮ, ವನದುರ್ಗಾ ಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ ಮೊದಲಾದ ವೈದಿಕ ಕಾರ್ಯಕ್ರಮ
ನಡೆಯಲಿದ್ದು . ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6 ರಿಂದ ಶ್ರೀ ಗುಳಿಗ ದೈವದ ಕೋಲವು ನಡೆಯಲಿದ್ದು ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಹಾಗೂ ರಾತ್ರಿ ಸಮಯದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ. ವಾರ್ಷಿಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಂಟೆ 7 ರಿಂದ ಸಂಜೆ 4 ಗಂಟೆಯ ತನಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ ಭಜನೆಯು ಮಹಾಮಂಗಳಾರತಿಯೊಂದಿಗೆಸಂಪನ್ನವಾಗಲಿದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಗುಳಿಗ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು.


ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೊಕ್ಕಾಡಿ ಮಾತನಾಡಿ ಈ ಭಾಗದ ಅಭಿವೃದ್ದಿಗೆ ಜನಪ್ರತಿನಿಧಿಗಳ ಭರವಸೆ ದೊರೆತಿದೆ ಹೊರತು ಸರಕಾರದಿಂದ ಏನೂ ದೊರೆತ್ತಿಲ್ಲ ಗ್ರಾಮ ಪಂ ಸದಸ್ಯ ಸುದೇಶ್ ಅರಂಬೂರ ತಮ್ಮ ವಿಶೇಷ ಮುತುವರ್ಜಿ ವಹಿಸಿ ಈ ಬಾಗದ ರಸ್ತೆ ಕಾಂಕ್ರೀಟ್ ಕರಣಕ್ಕೆ ಅನುದಾನ ಇರಿಸಿದ್ದಾರೆ ಅಲ್ಲದೆ ಕುಡಿಯುವ ನೀರು ಮತ್ತು ದಾರಿ ದೀಪದ ವ್ಯವಸ್ಥೆಯ ಭರವಸೆ ನೀಡಿದ್ದಾರೆ, ಆದರೆ ಸಿರಿಕುರಲ್ ನಗರ ಮಾದರೀ ನಗರವಾಗಿ ಮಾರ್ಪಾಡಾಗಲು ಎಲ್ಲಾ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು,
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರ ವಾಸುದೇವ ಗೌಡ ಕುಡೆಕಲ್ಲು, ಉತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಪಾಲಡ್ಕ ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೊಕ್ಕಾಡಿ ಸಿರಿಕುರಲ್ ನಗರ, ಶ್ರೀ ವನದುರ್ಗಾ ರದಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಲ್ವರ್ಪೆ, ಖಜಾಂಜಿ ಬೆಳ್ಯಪ್ಪ ಗೌಡ, ಗ್ರಾ.ಪಂ.ಸದಸ್ಯ ಸುಧೇಶ್ ಅರಂಬೂರು ಉಪಸ್ಥಿತರಿದ್ದರು.

Leave a Response

error: Content is protected !!