ರಾಜ್ಯ

ಉಪ್ಪಿನಂಗಡಿ-ಪುತ್ತೂರು ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ್ ರೈ: ರಸ್ತೆ ಕಾಮಗಾರಿ ಅವ್ಯವಸ್ಥೆ ಹಿನ್ನೆಲೆ ಶೀಘ್ರ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ.

ಪುತ್ತೂರು, ಮೇ 25: ರಸ್ತೆ ಕಾಮಗಾರಿ ಅವ್ಯವಸ್ಥೆ ಹಿನ್ನೆಲೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ತರಾಟೆ ತೆಗೆದುಕೊಂಡಿದ್ದಾರೆ.

ಉಪ್ಪಿನಂಗಡಿ-ಪುತ್ತೂರು ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಶಾಸಕ ಅಶೋಕ್ ರೈ ಅಸಮಾಧಾನ ಗೊಂಡಿದ್ದು, ಮಳೆಗಾಲ ಆರಂಭವಾದರೂ ಡ್ರೈನೇಜ್ ಸಮಸ್ಯೆ ಸರಿಪಡಿಸದೇ ವಿಳಂಬವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯರ ಸಮಸ್ಯೆ ಆಲಿಸಿದ್ದಾರೆ

ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಅವ್ಯವಸ್ಥೆಯಾಗಿದೆ, ಎಷ್ಟು ದಿನದಲ್ಲಿ ಕೆಲಸ ಮುಗಿಸ್ತೀರಿ ಅಂತ ಹೇಳಿ, ‘ನನ್ನನ್ನ ಸಮಾಧಾನ ಮಾಡಲು ನೀವು ಹೇಳೋದು ಬೇಡ’, ಡ್ರೈನೇಜ್ ಮತ್ತು ಡಿವೈಡರ್ ಕಾಮಗಾರಿ ವಿಚಾರದಲ್ಲಿ ಅಧಿಕಾರಿಗಳಿಗೆ ಶಾಸಕರು ತರಾಟೆ ತೆಗೆದುಕೊಂಡಿದ್ದಾರೆ.

ಅಶೋಕ್ ರೈಗೆ ಓಟ್ ಹಾಕಿ ಸಮಸ್ಯೆ ಆಯ್ತು ಅಂತ ಜನ ಹೇಳಬಾರದು, ನಿಮಗೆ ಆಗುತ್ತಾ ಇಲ್ವಾ ಹೇಳಿ, ಯಾವಾಗ ಮುಗಿಸ್ತೀರಾ ಹೇಳಿ ಅಂತ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಖಡಕ್ ಸೂಚನೆ ಕೊಟ್ಟಿದ್ದಾರೆ

Leave a Response

error: Content is protected !!