

ವಿಟ್ಲ: ಪೆರುವಾಯಿ ಬೆರಿಪದವು ರಸ್ತೆಯಲ್ಲಿ ಸ್ಕೂಟರ್ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ್ದು, ರಿಕ್ಷಾ ಪ್ರಯಾಣಿಕರೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ.
ಬಾಯಾರು ಪೆರುವೋಡಿ ನಿವಾಸಿ ಸುರೇಶ್ ಭಟ್ ಪುತ್ರ ನಾಗೇಶ್ ಭಟ್ (೪೭) ನಿಧನರಾಗಿದ್ದಾರೆ. ವಿನೋದ್ ಹಾಗೂ ಅಣ್ಣು ಎಂಬವರು ಗಾಯಗೊಂಡು ಚಿಕಿತ್ಸೆಯನ್ನು ಪಡೆದಿದ್ದಾರೆ.
ವಾಹನವನ್ನು ಹಿಂದಿಕ್ಕುವ ಸಂದರ್ಭದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾಗಿದ್ದು, ರಿಕ್ಷಾ ರಸ್ತೆಯಲ್ಲಿ ಉರುಳಿದೆ. ಈ ಸಂದರ್ಭ ರಿಕ್ಷಾದಲ್ಲಿದ್ದ ಪ್ರಯಾಣಿಕರೊಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಸ್ತೆಗೆ ಎಸೆಯುವ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ನಾಗೇಶ್ ಭಟ್ ಮೃತ ಪಟ್ಟಿದ್ದಾರೆಂದು ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೃಢೀಕರಿಸಿದ್ದಾರೆ. ಆಯುಧ ಪೂಜಾ ಕಾರ್ಯಕ್ರಮದಲ್ಲಿ ತೊಡಗಿರುವ ವಿಟ್ಲ ಪೊಲೀಸರು ಆಸ್ಪತ್ರೆಗೆ ಈ ತನಕವೂ ತೆರಳಿಲ್ಲ
add a comment