ರಾಜ್ಯ

ಸಂಪಾಜೆಯಲ್ಲಿ ಬಿರುಸಿನಿಂದ ಸಾಗುತ್ತಿರುವ ಹೊಳೆಯಿಂದ ಹೂಳೆತ್ತುವ ಕಾರ್ಯ :

ಕಳೆದ ವರ್ಷ ಮಳೆಗಾಲದಲ್ಲಿ ಸಂಪಾಜೆ ಗ್ರಾಮದ ಹೊಳೆಬದಿಯ ಹಲವು ತಗ್ಗು ಪ್ರದೇಶದ ಮನೆಗಳಿಗೆ ಹಾಗೂ ಕಲ್ಲುಗುಂಡಿ ಪೇಟೆಯಲ್ಲಿ ಹೋಳೆ ನೀರು ನುಗ್ಗಿ
ಅನೇಕ ಕಡೆ ಹಾನಿಗಳಾಗಿತ್ತು , ನಂತರ ಈ ರೀತಿಯ ಪ್ರವಾಹಕ್ಕೆ ಹೊಳೆಯಲ್ಲಿ ತುಂಬಿರುವ ಹೂಳು ಕಾರಣವೆಂದು ತಿಳಿದು ಹೊಳೆಯಲ್ಲಿ ತುಂಬಿರುವ ಹೂಳೆತ್ತಲು ನಾಗರಿಕರಿಂದ ತೀವ್ರ ಒತ್ತಾಯ ಕೇಳಿ ಬಂದಿತ್ತು ಇದೀಗ ಸಂಪಾಜೆ ಗ್ರಾಮದ ಬಹು ಮುಖ್ಯ ಬೇಡಿಕೆಯಾದ ಹೂಳೆತ್ತುವ ಹೋರಾಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದಂತಾಗಿದೆ.

ಸಮಸ್ಯೆ ಪರಿಹಾರದ ಭಾಗವಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೇಮಂತ್ ರವರು
ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ
ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ
ಕಾಮಗಾರಿ ಆರಂಭದ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಇಂದು ಸಂಪಾಜೆ ಹೊಳೆಯಿಂದ ಅಗತ್ಯ ಬಾಗದಲ್ಲಿ ಹೂಳೆತ್ತುವ ಕ್ರೀಯೆ ಆರಂಭ ಗೊಂಡಿದೆ .

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ.ಹಮೀದ್ ಗೂನಡ್ಕ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ.ಶಾಹಿದ್ ತೆಕ್ಕಿಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಜಗದೀಶ್ ರೈ, ಎಸ್. ಕೆ. ಹನೀಫ್, ಹೋರಾಟ ಸಮಿತಿಯ ರವಿಶಂಕರ್ ಭಟ್, ಪದ್ಮಯ್ಯ ಗೌಡ, ನಾಗೇಶ್ ಪಿ. ಆರ್, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಕುಂಞಕಣ್ಣಾ ಮನಿಯಣಿ,
ಪ್ರಶಾಂತ್ ವಿ. ವಿ. ಅಶ್ರಫ್ ಎಚ್. ಎ ಮಂಜುನಾಥ್
ಅಬೂಬಕ್ಕರ್. ಎಂ. ಸಿ ಮೊದಲದವರು ಉಪಸ್ಥಿತರಿದ್ದರು.

Leave a Response

error: Content is protected !!