ರಾಜ್ಯ

ಜ.21-22ರಂದು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ: ಆಮಂತ್ರಣ ಬಿಡುಗಡೆ

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಯವರ ನೇತೃತ್ವದಲ್ಲಿ ಸಂಘದ ಕಛೇಯಲ್ಲಿ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು. ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ, ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಂದು ಮನೆಗೆ ಆಮಂತ್ರಣ ತಲುಪುವಂತೆ ಜವಾಬ್ದಾರಿ ನೀಡಲಾಯಿತು. ವಿವಿಧ ಸಮಿತಿಯ ಸಂಚಾಲಕರು ಅವರವರ ಅಭಿಪ್ರಾಯ ಮಂಡಿ ಸಿದರು, ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸೊಸೈಟಿ ಮೆನೇಜರ್ ವೀರೇಂದ್ರ ಕುಮಾರ್ ಜೈನ್ ವಿವಿಧ ಸಮಿತಿ ಸಂಚಾಲಕರಾದ ಪ್ರಚಾರ ಸಮಿತಿ ಸಂಚಾಲಕರಾದ ಜಿ. ಕೆ. ಹಮೀದ್ ಗೂನಡ್ಕ, ಕ್ರೀಡಾ ಮೆರವಣಿಗೆ ಸಮಿತಿ ಸಂಚಾಲಕರಾದ ಕೆ. ಪಿ. ಜಗದೀಶ್ ಕುಯಿಂತೋಡು, ಸನ್ಮಾನ ಸಮಿತಿ ಸಂಚಾಲಕರಾದ ದಾಮೋದರ್ ಮಾಸ್ಥರ್ ಕಾರ್ಯಕ್ರಮ ಸoಯೋಜನಾ ಸಮಿತಿ ಸಂಚಾಲಕರಾದ ಚಿದಾನಂದ ಮಾಸ್ಥರ್ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಜಯಾನಂದ ಸಂಪಾಜೆ, ಅತಿಥಿ ಸತ್ಕಾರ ಸಮಿತಿ ಸಂಚಾಲಕರಾದ ಜಗದೀಶ್ ರೈ, ಕೆ. ಆರ್, ವಸ್ತು ಪ್ರದರ್ಶನ ಸಮಿತಿಯ ಕೆ. ಪಿ ಜಾನಿ, ವಾಹನ ನಿಲುಗಡೆ ಸಮಿತಿ ಸಂಚಾಲಕರಾದ ಮುಜಾಪರ್ ಅಹಮದ್, ಶಿಸ್ತು ಸಮಿತಿಯ ಶ್ರೀಧರ್ ಕೆ. ಕೆ. ಸ್ವಚ್ಛತಾ ಸಮಿತಿಯ ಯಮುನಾ ಬಿ. ಎಸ್. ಚಪ್ಪರ ಮತ್ತು ಅಲಂಕಾರ ಸಮಿತಿಯ ಗಣಪತಿ ಭಟ್ ಪಿ. ಎನ್. ಅರೋಗ್ಯ ಸಮಿತಿಯ ಜಯಶ್ರೀ. ಸೊಸೈಟಿ ನಿರ್ದೇಶಕರುಗಳಾದ ಸುಮತಿ ಶಕ್ತಿವೇಲು, ರಾಜೀವಿ, ಹಮೀದ್ ಎಚ್. ಚಂದ್ರಶೇಖರ ಕೆ. ಯು, ಉಷಾ ಕೆ. ಎಂ, ಪ್ರಕಾಶ್ ಕೆ. ಪಿ. ಕ್ರೀಡಾ ಸಮಿತಿಯ ಸದಸ್ಯರಾದ ಕೇಶವ ಬಂಗ್ಲೆಗುಡ್ಡೆ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಕಿಶೋರ್ ಬಿ. ಎಸ್. ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಪಿ. ಎ. ಉಮ್ಮರ್ ಹಾಜಿ ಗೂನಡ್ಕ, ಸಮಿತಿಯ ಖಜಾಂಜಿ ಜಿ. ರಾಮಚಂದ್ರ ಕಲ್ಲುಗದ್ದೆ,ಕಾರ್ಯಕ್ರಮ ಸಂಯೋಜನೆ ಸಮಿತಿ ಸದಸ್ಯರಾದ ಸವಾದ್ ಗೂನಡ್ಕ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಮೈಕಲ್ ಪಾಯಸ್, ವಾಹನ ನಿಲುಗಡೆ ಸಮಿತಿಯ ಮಾದವ ಗೌಡ ಪಿ. ಕೆ ಅತಿಥಿ ಸತ್ಕಾರ ಸಮಿತಿಯ ಮಂಜುನಾಥ್,ವೀರಪ್ಪ ಗೌಡ ದೋಳ ಮೊದಲಾದವರು ಉಪಸ್ಥಿತರಿದ್ದರು

Leave a Response

error: Content is protected !!