ರಾಜ್ಯ

ಹಿರಿಯಡ್ಕ: ಸಬ್
ಜೈಲಿನಲ್ಲಿ ವಿಚಾರಣಾಧೀನ
ಕೈದಿ ಆತ್ಮಹತ್ಯೆ

ಹಿರಿಯಡ್ಕ: ವಿಚಾರಾಣಾಧೀನ ಕೈದಿಯೋರ್ವ
ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ
ಹಿರಿಯಡಕದ ಸಮೀಪದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ
ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ.
ಈತನು ಇತರೆ ಮೂವರೊಂದಿಗೆ ಸೇರಿಕೊಂಡು ಕಾರ್ಕಳದ ಆನಂದ ದೇವಾಡಿಗ ಎಂಬಾತನನ್ನು ಬೈಂದೂರು ತಾಲೂಕಿನ ಒತ್ತಿನೆಣೆ ಹೇನ್ ಬೇರು ಬಳಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಸಜೀವವಾಗಿ ಸುಟ್ಟು
ಹತ್ಯೆಗೈದಿದ್ದರು. ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳುವ
ಉದ್ದೇಶದಿಂದ ಈ ಕೃತ್ಯ ಎಸಗಿದ್ದರು. ಆದರೆ ಆ ಬಳಿಕ
ಪೊಲೀಸರಿಗೆ ಸಿಕ್ಕಿಬಿದ್ದ ಸದಾನಂದ ಸೇರಿಗಾರ್ ಹಾಗೂ
ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್ ದೇವಾಡಿಗ,
ನಿತೀಶ್ ದೇವಾಡಿಗ ಜೈಲು ಪಾಲಾಗಿದ್ದರು. ಜೈಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಬಹಳಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದನು.ಇದೇ ಕಾರಣದಿಂದ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇದನ್ನು ಗಮನಿಸಿದ ಇತರ ಕೈದಿಗಳು ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆಸದಾನಂದ ಸೇರಿಗಾರ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ , ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ ಮತ್ತು ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ

Leave a Response

error: Content is protected !!