

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಮುಂಡಾಜೆ ಸಮೀಪ ನಡೆದಿದೆ.
ಕಾಜೂರಿನಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮಕ್ಕೆ ಕಕ್ಕಿಂಜೆಯಿಂದ ಅಟೋ ರಿಕ್ಷಾದಲ್ಲಿ ತೆರಳುತಿದ್ದಾಗ ಮುಂಡಾಜೆ ಬಳಿಯ ಕಾಪು ಚೆಡಾವು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ನದಿಯ ಪ್ರಪಾತಕ್ಕೆ ಉರುಳಿಬಿದಿದ್ದು ಅದರಲ್ಲಿದ್ದ ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.
ಆಟೋದಲ್ಲಿ ಉಳಿದ ಪ್ರಯಾಣಿಕರಾದ ಮಹಮ್ಮದ್ ಆಶ್ರಫ್ ,ಮರಿಯಮ್ಮ ರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
add a comment