ರಾಜ್ಯ

ರಮಾನಾಥ್ ರೈ ಮತ್ತು ನಂದಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಾಯಕರು ಕ್ಷಮೆ ಯಾಚಿಸಬೇಕು: ನಂದಕುಮಾರ್ ಅಭಿಮಾನಿ ಬಳಗ ಆಗ್ರಹ.
ಕ್ಷಮೆ ಕೇಳದಿದ್ದರೆ ಚುನಾವಣೆಯಲ್ಲಿ ತಟಸ್ಥರಾಗುತ್ತೇವೆ

ರಮಾನಾಥ್ ರೈ ಕಾಂಗ್ರೇಸ್ ಪಕ್ಷಕ್ಕೆ ಕಳೆದ ಮೂವತ್ತು ವರುಷಗಳಿಗೆ ಶಾಸಕರಿಲ್ಲದ ಶೂನ್ಯವನ್ನು ತುಂಬಿದವರು.ಅವರಿಂದ ಕಡಬ ತಾಲೋಕಿನಲ್ಲಿ ಹಲವು ಸೇತುವೆ, ರಸ್ತೆಗಳ ನಿರ್ಮಾಣ ಸಾಧ್ಯವಾಗಿದೆ, ಕಡಬ ತಾಲೋಕು ನಿರ್ಮಾಣವಾಗಲು ಅವರ ಕೊಡುಗೆ ಅಪಾರ ಇಂತಹ ಸಜ್ಜನ ರಾಜಕಾರಣಿಯನ್ನು ಕೆ ಪಿ ಸಿ ಅದ್ಯಕ್ಷರು ಸುಳ್ಯಕ್ಕೆ ಅಭಿಪ್ರಾಯ ಸಂಗ್ರಹಿಸಲು ಕಳುಹಿಸಿದ್ದರು, ಅವರು ಅಭಿಪ್ರಾಯ ಸಂಗ್ರಹಿ ವರದಿಯನ್ನು ಸಲ್ಲಿಸಿದ್ದರು, ಅಂತಹವರ ಬಗ್ಗೆ ಕೈಗೆ ಬಿ ಪಾರಂ ಸಿಕ್ಕಿದ ಮೇಲು , ಮಾದ್ಯಮಗಳ ಎದುರು ನಿಂದನೆ ಮಾಡಿದ್ದಾರೆ, ನಂದಕುಮಾರ್ ಅಭಿಮಾನಿಗಳನ್ನು ಕಾಂಗ್ರೇಸ್ ಕಾರ್ಯಕರ್ತರಲ್ಲ, ಎಸ್ ಡಿ ಪಿ ಐ ಕಾರ್ಯಕರ್ತರು ಇದ್ದರು ಎನ್ನುವ ಮೂಲಕ ಮೂಲ ಕಾಂಗ್ರೇಸಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಈ ಬಗ್ಗೆ ಮಾತನಾಡಿದ ಮುಖಂಡರು ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಂದಕುಮಾರ್ ಅಭಿಮಾನಿ ಬಳಗ ತಟಸ್ಥ ದೋರಣೆ ತಳೆಯುವುದಾಗಿ ನಂದಕುಮಾರ್ ಅಭಿಮಾನಿ ಬಳಗದ ಸಂಚಾಲಕ ಬಾಲಕೃಷ್ಣ ಬುಳೇರಿ ತಿಳಿಸಿದ್ದಾರೆ ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು, ನಂದಕುಮಾರ್ ಪಕ್ಷೇತರವಾಗಿ ಸ್ಪರ್ದೆ ಮಾಡುವುದು ಅಥವಾ ತಟಸ್ಥರಾಗಿ ಉಳಿಯುವುದ ಎಂಬ ನಿರ್ಣಯಗಳಿಗೆ ಹಿಂದೆ ಸಭೆಗಳಲ್ಲಿ ಬರಲಾಗಿತ್ತು ಹಾಗಿದ್ದು ನಂದಕುಮಾರ್ ಭವಿಷ್ಯದ ರಾಜಕೀಯ ನೋಡಿಕೊಂಡು, ಸ್ಪರ್ದೆ ಮಾಡದೇ ಇರುವ ಬಗ್ಗೆ ಕೊನೆ ಕ್ಷಣದಲ್ಲಿ ನಿರ್ಣಯಕ್ಕೆ ಬರಲಾಯಿತು ಎಂದು ಹೇಳಿದರು.

ಕೆಲವು ಕಾಂಗ್ರೇಸ್ ಮುಖಂಡರಿಗೆ ಸುಳ್ಯದಲ್ಲಿ ಕಾಂಗ್ರೇಸ್ ಅಧಿಕಾರಕೆ ಬರಬಾರದು ಎಂಬ ಆಲೋಚನೆ ಇದೆ, ಇದನ್ನು ರಾಜ್ಯ ನಾಯಕರಿಗೂ ತಿಳಿಸಿದ್ದೇವೆ, ಇನ್ನು ಕೆಲವರು ನಂದಕುಮಾರ್ ಅಭಿಮಾನಿ ಬಣವನ್ನು ಕೆರಳಿಸುವ ಕ್ರೀಯೆಯನ್ನು ಸಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ.ಎಂದು ಆರೋಪವನ್ನು ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಮುಖಂಡರಾದ ಸತೀಶ್ ಶೆಟ್ಟಿ ಬಲ್ಯ, ಕೆ ಗೋಕುಲ್ ದಾಸ್, ಪ್ರವೀಣ್ ಕುಮಾರ್ ಕೆಡಂಜಿ ಗುತ್ತು, ಸಚಿನ್ ರಾಜ್ ಶೆಟ್ಟಿ, ರವೀಂದ್ರ ಕುಮಾರ್ ರುದ್ರಪಾದ, ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.

Leave a Response

error: Content is protected !!