

ಸುಳ್ಯ: ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ನಡೆಯಲಿದ್ದು ಸುಳ್ಯ ತಾಲೂಕಿನಲ್ಲಿ ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.ದ.ಕ.ಜಿಲ್ಲೆಯ 4 ಖಾಸಗಿ ಸಹಿತ 98 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 523 ಶಾಲೆಗಳ 29,572 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 4 ಖಾಸಗಿ ಸಹಿತ 98 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಮಾ.31ರಿಂದ ಆರಂಭಗೊಳ್ಳುವ ಪರೀಕ್ಷೆಯು ಎಪ್ರಿಲ್ 15ರವರೆಗೆ ನಡೆಯಲಿದೆ.
ಇನ್ನು ಸುಳ್ಯ ತಾಲೂಕಿನಲ್ಲಿ ಆರು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿದೆ. ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು, ಗಾಂಧಿನಗರ ಪ್ರೌಢ ಶಾಲೆ(ಕೆಪಿಎಸ್), ಸುಳ್ಯ ಸೈಂಟ್ ಜೋಸೆಫ್ ಶಾಲೆ, ಎನ್‌ಎಂಪಿಯುಸಿ ಅರಂತೋಡು,ಕೆಪಿಎಸ್ ಬೆಳ್ಳಾರೆ, ಹಾಗೂಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಪರೀಕ್ಷಾ ಕೇಂದ್ರಗಳಾಗಿವೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕಣ್ಗಾವಲಿದ್ದು,ಪರೀಕ್ಷಾ ಕೊಟಡಿಯ ಸಮೀಪವೇ ಶೌಚಾಲಯ, ಕುಡಿಯಲು ನೀರು ಇತ್ಯಾದಿ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ 100ಮೀ ಅಂತರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಯಾವುದೇ ಖಾಸಾಗಿ ವಾಹನಗಳು ಪ್ರವೇಶ ಮಾಡುವಂತಿಲ್ಲ,ದೂರದೂರಿನ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಪ್ರಯಾಣಕ್ಕೆ ಸರಕಾರಿ ಬಸ್‌ಗಳಲ್ಲಿ ಉಚಿತ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.