ರಾಜ್ಯ

ರಾಜ್ಯ ಬಜೆಟ್‌ 2023: ಹೊಸ ಕೊಡುಗೆಗಳು ಏನು?

ಬೆಂಗಳೂರು: ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಹಲವು ಘೋಷಣೆಗಳ ಮೂಲಕ ರಾಜ್ಯದ ಮತದಾರರ ಮನಗೆಲ್ಲಲು ಯತ್ನಿಸಿದ್ದಾರೆ.
ಈ ಸಲದ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ ಹೊಸ ಯೋಜನೆ ಅಥವಾ ಘೋಷಣೆಯ ಮಾಹಿತಿ ಇಲ್ಲಿದೆ…

  • ರೈತರಿಗಾಗಿ ‘ಭೂ ಸಿರಿ’ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಇದರಡಿಯಲ್ಲಿ ₹10 ಸಾವಿರ ಹೆಚ್ಚುವರಿ ಸಹಾಯಧನ ನೀಡಲಾಗುವುದು. ‘ರೈತ ಸಿರಿ’ ಯೋಜನೆ ಅಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.
  • ‘ವಿದ್ಯಾವಾಹಿನಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ₹350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗುವುದು.
  • ‘ಗೃಹಿಣಿ ಶಕ್ತಿ’ ಯೋಜನೆ ಜಾರಿ ಮಾಡಿ, ₹46,278 ಕೋಟಿ ಅನುದಾನ ನೀಡಲಾಗುವುದು.
  • ‘ನಮ್ಮ ನೆಲೆ’ ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ ನೀಡಲಾಗುವುದು.
  • ‘ಸಹ್ಯಾದ್ರಿ ಸಿರಿ’ ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ‘ಒಂದು ತೋಟ ಒಂದು ಬೆಳೆ’ ಯೋಜನೆಗೆ ₹10 ಕೋಟಿ ಮೀಸಲಿಡಲಾಗುವುದು.
  • ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ‘ಮತ್ಸ್ಯ ಸಿರಿ’ ಯೋಜನೆ ಜಾರಿಗೆ ತರಲಾಗುವುದು.

: ರೈತರಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ

  • ‘ಮುಖ್ಯಮಂತ್ರಿ ವಿದ್ಯಾ ಶಕ್ತಿ’ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.
  • ‘ಸಹಸ್ರ ಸರೋವರ’ ಯೋಜನೆ ಅಡಿ ರಾಜ್ಯದ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿ ಮಾಡಲಾಗುವುದು.
  • ‘ಬದುಕುವ ದಾರಿ’ ಯೋಜನೆಯಡಿ ಯುವಜನರಿಗೆ 3 ತಿಂಗಳು ಐಟಿಐ ತರಬೇತಿ ನೀಡಲಾಗುವುದು
  • ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ‘ಯುವಸ್ನೇಹಿ’ ಯೋಜನೆಯಡಿ ₹2 ಸಾವಿರ ನೀಡಲಾಗುವುದು.
  • ₹100 ಕೋಟಿ ರೂ. ವೆಚ್ಚದಲ್ಲಿ ಶಾಲೆಗೆ ತೆರಳಲು ‘ಮಕ್ಕಳ ಬಸ್’ ಯೋಜನೆ ರೂಪಿಸಲಾಗುವುದು.
  • ‘ಜಲನಿಧಿ’ ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ ‘ಪುಣ್ಯ ಕೋಟಿ ದತ್ತು ಯೋಜನೆ’ ಹಣಕಾಸು ನೆರವು ನಿಡಲಾಗುವುದು.
  • ‘ಸ್ವಚೇತನ’ ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡಬಹುದು

Leave a Response

error: Content is protected !!