ಪುತ್ತೂರಿಗೆ ಅಮಿತ್ ಷಾ ಆಗಮನ
ಅಡಿಕೆ ಧಾರಣೆ ಸ್ಥಿರಗೊಳಿಸಿ: ಹಳದಿ ರೋಗದಿಂದ ಆರ್ಥಿಕ ನಷ್ಟಹೊಂದಿದ ರೈತರಿಗೆ 1000 ಕೋಟಿ ಪರಿಹಾರ ಒದಗಿಸಲಿ: ಸುಳ್ಯ ಕಾಂಗ್ರೇಸ್ ಆಗ್ರಹ.


ಕ್ಯಾಂಪ್ಕೂ ಸಂಸ್ಥೆ ೫೦ ವರ್ಷ ಪೂರೈಸಿ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಅಮಿತ್ ಷಾ ಪುತ್ತೂರಿಗೆ ಆಗಮಿಸುತ್ತಿರುವುದಕ್ಕೆ ಬ್ಲಾಕ್ ಕಾಂಗ್ರೇಸ್ ಸ್ವಾಗತಿಸುತ್ತದೆ, ಆದರೆ ಅವರ ಈ ಭೇಟಿ ರಾಜಕೀಯ ಬೇಟಿಯಾಗದೆ, ಅಡಿಕೆ, ರಬ್ಬರ್ , ಕಾಳುಮೆಣಸು ಬೆಳೆಸುವ ರೈತರಿಗೆ ಅನುಕೂಲಕರವಾಗಲಿ ಎಂದು ಕಾಂಗ್ರೇಸ್ ಆಶಿಸುತ್ತದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಹೇಳಿದೆ , ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿದ ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ ಮತ್ತು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಈ ಬಗ್ಗೆ ಆಗ್ರಹ ವ್ಯಕ್ತ ಪಡಿಸಿದ್ದಾರೆ. ವಾರಣಾಶಿ ಈಶ್ವರ ಭಟ್ ಸ್ಥಾಪಿಸಿದ ಕ್ಯಾಂಪ್ಕೋ ಸಂಸ್ಥೆಯನ್ನು ಬಿ ಜೆ ಪಿ ವ್ಯಾಪಾರಿಕರಣದ ಸಂಸ್ಥೆ ಮಾಡಿದ್ದಾರೆ. ಕ್ಯಾಂಪ್ಕೋ ರೈತರ ರಕ್ಷಣಾ ಸಂಸ್ಥೆಯಾಗಬೇಕು, ಕ್ಯಾಂಪ್ಕೊ ಸಂಸ್ಥೆಯಲ್ಲಿ ಅಡಿಕೆ ಸ್ಥಿರದಾರಣೆ ಯಾಗಬೇಕು , ಸಂಸ್ಥೆ ಪ್ರಕಟಿಸುವ ದರಕ್ಕೂ ಮತ್ತು ಅವರು ಖರೀದಿ ಮಾಡುವ ಧರಕ್ಕೂ ಅಜಗಜಾಂತರ ವ್ಯತ್ಯಾಸ ವಿದೆ, ಇದು ಕ್ಯಾಂಪ್ಕೋ ಸಂಸ್ಥೆಯನ್ನೇ ನಂಬಿದ ರೈತರಿಗೆ ವ್ಯವಹಾಕರಕ್ಕೆ ಕಷ್ಟ ವಾಗುತ್ತದೆ ಎಂದು ಹೇಳಿದ ಅವರು,ಅಮಿತ್ ಷಾ ಪುತ್ತೂರಿಗೆ ಆಗಮಿಸುವ ಸಂದರ್ಭ ಬಿ ಜೆ ಪಿ ಯವರು ,ಹಳದಿ ಅಡಿಕೆ ಎಲೆ ರೋಗದಿಂದ ಕಂಗೆಟ್ಟಿರುವ ರೈತರಿಗೆ ೧೦೦೦ ಕೋಟಿ ಪರಿಹಾರ ನೀಡಲು ಒತ್ತಾಯಿಸ ಬೇಕು,ಎಲೆ ಚುಕ್ಕಿ ರೋಗಕ್ಕೆ ಅವರ ವಿವೇಚನೆಗೆ ತಕ್ಕಂತಹ ಪರಿಹಾರ ಮತ್ತು ಔಷದ ಕಂಡು ಹಿಡಿಯಲು ಒತ್ತಾಯಿಸುವುದು, ಅಡಿಕೆ ಬೆಳೆ ಬೆಲೆ ಸ್ಥಿರೀಕರಣಕ್ಕೆ ಆಮದೀಕರಣ ನಿಲ್ಲಿಸುವುದು, ರಬ್ಬರ್ ಕರಿಮೆಣಸು, ಮೊದಲಾದ ಬೆಳೆ ಆಮದೀಕರಣ ನಿಲ್ಲಿಸಬೇಕು,ಕೇಂದ್ರ ಸರಕಾರ ಕ್ಯಾಂಪ್ಕೂ ಸಂಸ್ಥೆಗೆ ನೀಡಿರುವ 162 ಕೋಟಿ ಏನಾಯಿತು, ಆ ಮೊತ್ತ ರೈತರಿಗೆ ದೊರೆಯುವಂತೆ ಮಾಡಬೇಕು ಮೊದಲಾದ ಬೇಡಿಕೆಯನ್ನು ಅಮಿತ್ ಷಾ ಗಮನಕ್ಕೆ ತರುವ ಕೆಲಸ ಬಿ ಜೆಪಿ ಮಾಡಬೇಕು ಎಂದು ಹೇಳಿದರು.

ಜನತಾದಳ ಕಳೆದ ಬಾರಿ ಸಾಲ ಮನ್ನಾ ಘೋಷಣೆ ಮಾಡಿತ್ತು, ಕಾಂಗ್ರೇಸ್ ಸರಕಾರ ಸಾಕಷ್ಟು ರೈತರ ಸಾಲ ಮನ್ನಾ ಮಾಡಿತ್ತು, ಆದರೆ ತಾಂತ್ರಿಕ ಕಾರಣಕ್ಕೆ ಇನ್ನು ಕೆಲವು ರೈತರ ಸಾಲ ಮನ್ನಾ ಬಾಕಿಯಾಗಿದ್ದು , ಬಿಜೆಪಿ ಸರಕಾರ ಕೂಡಲೇ ಸಾಲ ಮನ್ನಾ ಬಾಕಿಯಿರುವ ರೈತರಿಗೆ ಪಾವತಿ ಮಾಡಬೇಕು ಎಂದು ಪಿ ಸಿ ಜಯರಾಮ ಆಗ್ರಹಿಸಿದರು. ಸುದ್ದಿಗೋಸ್ಟಿಯಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಸುರೇಶ್ ಅಮೈ, ಬ್ಲಾಕ್ ಪ್ರ. ಕಾರ್ಯದರ್ಶಿ ಪಿ.ಎಸ್ ಗಂಗಾಧರ ಮೊದಲಾದವರಿದ್ದರು.
