

ಪುತ್ತೂರು ಅಗಸ್ಟ್ 5: ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗ ಇದೀಗ ಒತ್ತಾಯ ಕೇಳಿ ಬಂದಿದ್ದು, ಇದೀಗ ಪ್ರಕರಣದ ಮರು ತನಿಖೆಗೆ ಪುತ್ತೂರು ಒಕ್ಕಲಿಗ ಗೌಡ ಸಂಘ ಒತ್ತಾಯಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಸೌಜನ್ಯ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಲಯ ನಿರಪರಾಧಿ ಎಂದು ತೀರ್ಪು ನೀಡಿದೆ. ಆದರೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು ಸತ್ಯ, ಹಾಗಾದರೆ ಕೊಲೆಗಾರ ಯಾರು ಅನ್ನೋದು ಪತ್ತೆಯಾಗಬೇಕು. ಪ್ರಕರಣ ನಡೆದು 11 ವರ್ಷ ಕಳೆದ ಬಳಿಕ ಮತ್ತೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು. ಈ ಹಿನ್ನಲೆ ಜಿಲ್ಲೆಯ ಎಲ್ಲಾ ಗೌಡ ಸಂಘಗಳನ್ನು ಸೇರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ
add a comment