ರಾಜ್ಯ

ಶಾಸಕಿ‌ ಭಾಗೀರಥಿ ಮುರುಳ್ಯ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನ.

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಭಾಗೀರಥಿ ‌ಮುರುಳ್ಯ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ಜೂ.24 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಿದರು. ಪ್ರೆಸ್ ಕ್ಲಬ್ ನಿರ್ದೇಶಕ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಭಾಷಣ ಮಾಡಿದರು.ಪ್ರೆಸ್ ಕ್ಲಬ್ ನಿರ್ದೇಶಕರುಗಳಾದ ಕೃಷ್ಣ ಬೆಟ್ಟ, ಯಶ್ವಿತ್ ಕಾಳಂಮನೆ, ಈಶ್ವರ ವಾರಣಾಸಿ, ಪೂಜಾಶ್ರೀ ವಿತೇಶ್, ಶರೀಫ್ ಜಟ್ಟಿಪಳ್ಳ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ದಯಾನಂದ ಕಲ್ನಾರ್, ಸತೀಶ್ ಹೊದ್ದೆಟ್ಟಿ, ಪದ್ಮನಾಭ ಅರಂಬೂರು, ಹಸೈನಾರ್ ಜಯನಗರ, ತೇಜೇಶ್ವರ್ ಕುಂದಲ್ಪಾಡಿ, ಶ್ರೀಜಿತ್ ಸಂಪಾಜೆ, ಭಾಗೀಶ್ ಕೆ.ಟಿ., ಜಯಶ್ರೀ ಕೊಯಿಂಗೋಡಿ, ಗಣೇಶ್ ಕುಕ್ಕುದಡಿ, ಶಿವರಾಮ ‌ಕಜೆಮೂಲೆ, ಯತೀಶ್ ಕದ್ರ, ಮಹೇಶ್ ರೈ‌ ಮೇನಾಲ, ಧೀರೇಶ್ ನಡುಬೈಲು, ಮೊದಲಾದವರಿದ್ದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ವಂದಿಸಿದರು.
ಕೋಶಾಧಿಕಾರಿ ರಮೇಶ್ ‌ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

Leave a Response

error: Content is protected !!