ರಾಜ್ಯ

ಪೆರುಮುಂಡ: ಶ್ರೀವಿಷ್ಣುಮೂರ್ತಿ, ಪಂಜುರ್ಲಿ ಮತ್ತು ಉಪದೈವಗಳ ಕೋಲ.

ಪೆರಾಜೆ ಗ್ರಾಮದ ಪೆರುಮುಂಡ ಶ್ರೀ ವಿಷ್ಣುಮೂರ್ತಿ ಮತ್ತು ಪಂಜುರ್ಲಿ ದೇವಸ್ಥಾನ ದಲ್ಲಿ ದೈವಗಳ ನಡಾವಳಿ ನೆರವೇರಿತು .ಜ.9 ಮತ್ತು 10 ರಂದು ಶ್ರೀ ವಿಷ್ಣು ಮೂರ್ತಿ, ಪಂಜುರ್ಲಿ, ಪಾಷಾಣಮೂರ್ತಿ ಹಾಗೂ ಗುರುಕಾರ್ನೋರು, ದೇವತೆದೈವಗಳ ಕೋಲ, ಗುಳಿಗ, ರಕ್ತೇಶ್ವರಿ ದೈವಗಳ ಕೋಲ ನಡೆಯಿತು. ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಗಂಗಾಧರ ಪೆರುಮುಂಡ, ಕಾರ್ಯದರ್ಶಿ ರಾಮಕೃಷ್ಣ ಪೆರುಮುಂಡ, ಕುಟುಂಬದ ಹಿರಿಯರಾದ ಕೂಸಪ್ಪ ಪೆರುಮುಂಡ, ಕುಟುಂಬ ಹಿರಿಯ ಸದಸ್ಯರಾದ ಮಾದವ ಪೆರುಮುಂಡ, ಅಮ್ಮಣ್ಣಿ ಸುಂದರ ಪೆರುಮುಂಡ, ಪದ್ಮಯ್ಯ ಪೆರುಮುಂಡ, ಶಶಿಕಲಾ ವೆಂಕಪ್ಪ ಪೆರುಮುಂಡ, ಮುಕುಂದ ಪೆರುಮುಂಡ, ಇಂದಿರಾ ವೆಂಕಟ್ರಮಣ ಪೆರುಮುಂಡ, ವಾಸುದೇವ ಪೆರುಮುಂಡ, ಲವ ಪೆರುಮುಂಡ, ಕುಶ ಪೆರುಮುಂಡ, ಸುರೇಶ್ ಪೆರುಮುಂಡ, ವಿಶ್ವನಾಥ ಪೆರುಮುಂಡ, ರುಕ್ಮಯ್ಯ ಪೆರುಮುಂಡ, ಅಶೋಕ ಪೆರುಮುಂಡ, ರಾಧಾಕೃಷ್ಣ ಪೆರುಮುಂಡ, ಹರೀಶ ಪೆರುಮುಂಡ, ಕಲ್ಲಪಳ್ಳಿ ಪೆರುಮುಂಡ ತರವಾಡಿನ ಸಮಿತಿಯ ಅಧ್ಯಕ್ಷ ರಮೇಶ ಪೆರುಮುಂಡ ಮತ್ತು ಕುಟುಂಬದ ಎಲ್ಲ ಸದಸ್ಯರು, ತರವಾಡಿನ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Leave a Response

error: Content is protected !!