


ಪೆರಾಜೆ ಬೆಟ್ಟದಪುರ ಅಮಚೂರು ಶ್ರೀ ದುರ್ಗಾ ಮಹಾಕಾಳಿ- ನಾಗಬ್ರಹ್ಮದೇವಸ್ಥಾನದಲ್ಲಿ 9ನೇ ವರ್ಷದ ಪ್ರತಿಷ್ಠಾ ಮಹೋತ್ಸವ ತಂತ್ರಿವರ್ಯರಾದ ಶ್ರೀ ಶ್ರೀಕೃಷ್ಣ ಗುರೂಜಿ ಶ್ರೀಕ್ಷೇತ್ರ ಕುಕ್ಕಾಜೆ, ಇವರ ನೇತೃತ್ವದಲ್ಲಿ ಫೆ.3 ರಂದು ವಿಜ್ರಂಭಣೆಯಿಂದ ನಡೆಯಿತು.
ಫೆ.3 ರಂದು,ಬೆಳಿಗ್ಗೆ ಗಂಟೆ 6-00 ಕ್ಕೆ ದೀಪ ಪ್ರತಿಷ್ಠೆ ನಂತರ ಶ್ರೀ ಗುರುಗಳ ಪಾದಪೂಜೆ ಬೆಳಿಗ್ಗೆ : 6-20 ಕ್ಕೆ: ಶ್ರೀ ಗಣಪತಿ ಹವನ,ಶುದ್ಧಿ ಕಲಶ, ಉದಯ ಪೂಜೆ ನಡೆದು,ಪೂರ್ವಾಹ್ನ 11-00 ರಿಂದ ಕುಣಿತ ಭಜನೆ ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕರವರಿಂದ ನಡೆಯಿತು.

ಮಧ್ಯಾಹ್ನ 12-00 ಕ್ಕೆ: ಶ್ರೀ ನಾಗಬ್ರಹ್ಮ ದೇವರಿಗೆ ಪೂಜೆ ಹಾಗೂ ನಾಗ ತಂಬಿಲ,ಮಧ್ಯಾಹ್ನ 1-00 ಕ್ಕೆ ಮಹಾಪೂಜೆ ದರ್ಶನಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.

ಸಂಜೆ 6-00 ರಿಂದ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಪುತ್ಯ-ಪೆರಾಜೆ ಇವರಿಂದ,ಶ್ರೀ ಬಸವೇಶ್ವರ ಭಜನಾ ಸಂಘ ಕಾಂತಬೈಲು ಭಜನಾ ಕಾರ್ಯಕ್ರಮ ನಡೆಯಿತು.ರಾತ್ರಿ 8-15 ಕ್ಕೆ: ಮಹಾಪೂಜೆ, ದರ್ಶನಬಲಿ ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ,ರಾತ್ರಿ 12-00 ರಿಂದ: ಶ್ರೀ ಅಮ್ಮನವರ ದೊಂದಿಸೇವೆ, ಶಕ್ತಿಪೂಜೆ,ಪ್ರಸಾದ ವಿತರಣೆ, ಮಂಗಳಾ ಸೇವೆಗಳು ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬೆಟ್ಟದಪುರದ ಮೋಕೇಸರರಾದ ಸುಕುಮಾರ ,ಶ್ರೀ ಕ್ಷೇತ್ರ ಬೆಟ್ಟದಪುರದ ,ಧರ್ಮದರ್ಶಿಗಳಾದ ಲೋಲಾಕ್ಷ ಬೆಟ್ಟದಪುರ ಶ್ರೀ ಕ್ಷೇತ್ರದ ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
