

ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಯುವಕರಿಬ್ಬರು
ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಅಜ್ಜಾವರ ಗ್ರಾಮದ ದೊಡ್ಡೇರಿಗೆ ಕಾರ್ಯಕ್ರಮವೊಂದಕ್ಕೆ
ಬಂದಿದ್ದ ಪುತ್ತೂರು ಕೌಡಿಚ್ಚಾರು ಸುತ್ತಮುತ್ತಲ 6 ಮಂದಿ ಯುವಕರು ಜತೆಯಾಗಿ ಪಕ್ಕದ ಪಯಸ್ವಿನಿ
ಹೊಳೆಗೆ ಈಜಾಡಲು ತೆರಳಿದ್ದು ಈ ವೇಳೆ ಇಬ್ಬರು
ಯುವಕರು ನೀರುಪಾಲಾದರೆಂದು ಹೇಳಲಾಗಿದೆ.
ಒಬ್ಬ ಯುವಕ ನೀರಿಗಿಳಿದು ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಆತನ ಸ್ನೇಹಿತನೂ ನೀರು ಪಾಲಾಗಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ ಮೃತಪಟ್ಟ ಯುವಕರನ್ನು ಜಿತೇಶ್ ಹಾಗೂ ಪ್ರವೀಣ್ ಎಂದು ಹೇಳಲಾಗಿದೆ ಅವರು ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡು,ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿ ಕಾನ, ಜತೆಯಾಗಿ ಸುಳ್ಯಕ್ಕೆ ಬಂದಿದ್ದರು.ಸುಳ್ಯದ ಓಡಬಾಯಿ ಬಳಿ ತೂಗುಸೇತುವೆ ಸಮೀಪ ಕಾರನ್ನು
ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿ ಹೋಗಿ ಬಳಿಕ ಪಯಸ್ವಿನಿ ನದಿ ಇಳಿದರು. ಈ ವೇಳೆ ದುರ್ಘಟನೆ ನಡೆಯಿತು.ಮೃತದೇಹಗಳನ್ನು ಸರಕಾರಿ ಆಸ್ಪತ್ರೆಗೆ ತರಲಾಗಿದೆ,

.
add a comment