

ಸುಳ್ಯ ಪೆರಾಜೆ ಮಧ್ಯೆ ಪಾಲಡ್ಕ ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ಇಂದು ಅಪರಾಹ್ನ 3.30 ರ ಸುಮಾರಿಗೆ ಸ್ವಿಫ್ಟ್ ಕಾರು ಮತ್ತು ಇಖೊ ಸ್ಪೋರ್ಟ್ಸ್ ಕಾರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಶಿಪ್ಟ್ ಕಾರಿನಲ್ಲಿದ್ದ ವೃದ್ಧೆ ಸೇರಿದಂತೆ ನಾಲ್ಕು ಮಂದಿ ಜಖಂಗೊಂಡ ಘಟನೆ ವರದಿಯಾಗಿದೆ. ಇಖೋ ಸ್ಪೋರ್ಟ್ಸ್ ಕಾರು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು, ಸ್ವಿಫ್ಟ್ ಕಾರು ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ವಿರುದ್ದ ದಿಕ್ಕಿಗೆ ತಿರುಗಿನಿಂತಿತ್ತು, ಗಾಯಾಳುಗಳನ್ನು ಕೆವಿಜಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ತಡೆ ಉಂಟಾಗಿತ್ತು, ಇಖೋ ಸ್ಪೋರ್ಟ್ ವಿರುದ್ದ ದಿಕ್ಕಿನಿಂದ ಬಂದು ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
add a comment