

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್( ರಿ )ಸುಳ್ಯ ತಾಲೂಕು ಸಂಪಾಜೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳಿಗೆ ಧರ್ಮಸ್ಥಳದಿಂದ ಉಡುಗೊರೆಯಾಗಿ ಬಂದ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ ವಹಿಸಿದರು. 3ವರ್ಷ ಸೇವೆ ಸಲ್ಲಿಸಿದ ಒಕ್ಕೂಟ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ ಪ್ರಸ್ತಾವಿಕ ಮಾತುಗಳನ್ನು ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಮಾತನಾಡಿ ಶುಭ ಹಾರೈಸಿದರು. ಎಲ್ಲಾ ಪದಾಧಿಕಾರಿಗಳಿಗೆ ಸಂಪಾಜೆ ವಲಯದ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ್ ಪೈಕ ಬ್ಯಾಗ್ ಕಿಟ್ ವಿತರಿಸಿದರು ಸುಮಾ ನೀರಬಿದ್ರೆ ಸ್ವಾಗತಿಸಿ. ಸೇವಾಪ್ರತಿನಿಧಿ ಮಧು ಮಾಲತಿ ಧನ್ಯವಾದ ಸಮರ್ಪಿಸಿದರು.

add a comment