

ಸದಾ ಸಮಾಜ ಸೇವೆಯಲ್ಲಿಯೇ ತೊಡಗಿಸಿ ಕೊಂಡಿರುವ ಜಿಲ್ಲೆಯ ಮಾದರಿಯಾಗಿರುವ ಯುವ ತೇಜಸ್ಸು.

ಸೇವೆಯಲ್ಲಿ ಸುದ್ದಿ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿರುವ “ಯುವ ತೇಜಸ್ಸು” ಸೇವಾ ಟ್ರಸ್ಟ್ ಕಟ್ಟಿಕೊಂಡ ಯುವಕರ ತಂಡವೊಂದು ನಾರ್ಣಕಜೆ ಎಂಬಲ್ಲಿ ಸುಮೂರು 20 ಕ್ಕೂ ಹೆಚ್ಚು ಮನೆಗಳ ಸಂಪರ್ಕಿಸಬೇಕಾದ ರಸ್ತೆಯಲ್ಲಿ ಕಾಲುಸಂಕ ನಿರ್ಮಿಸಿಕೊಡುವುದರ ಮೂಲಕ ಹಳ್ಳಿ ಜನರ ಮುಖದಲ್ಲಿ ತೇಜಸ್ಸು ಮೂಡುವಂತೆ ಮಾಡಿದೆ.ಸುಳ್ಯ ತಾಲೋಕಿನ ನಾರ್ಣಕಜೆಯಿಂದ ಪೈಲಾರು ಕಡೆ ಸಂಪರ್ಕಿಸ ಬಹುದಾದ ರಸ್ಥೆಯಲ್ಲಿ ಅಡ್ಡಲಾಗಿ ಹೊಳೆ ಹರಿದು ಹೋಗುವ ಕಾರಣ ಈ ಭಾಗದ ಜನ ಮಳೆಗಾಲದಲ್ಲಿ ಸುತ್ತು ಬಳಸಿ ಕಿಲೋಮೀಟರ್ ಗಟ್ಟಲೆ ನಡೆದು ಹೋಗ ಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು, ಇದನ್ನು ಮನಗಂಡ ಸಮಾಜ ಮುಖಿ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಮಾಡಿರುವ ಸುಳ್ಯದ ಯುವ ತೇಜಸ್ಸು ಟ್ರಸ್ಟ್ ನ ಯುವಕರು ಸಹಾಯಾರ್ಥವಾಗಿ ಸುಮಾರು ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿ ವೆಚ್ಚದಲ್ಲಿ ಕಬ್ಬಿಣದ ಕಾಲಸಂಕ ಸಿದ್ದಪಡಿಸಿ ಈ ಬಾಗದಲ್ಲಿ ಅಳವಡಿಸಿ ಇಲ್ಲಿನ ಜನರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಸುಮೂರು ಮೂವತ್ತಕ್ಕು ಹೆಚ್ಚು ಸಮಾನ ಮನಸ್ಕ ,ಯುವಕರು ಕಾಲು ಸಂಕ ನಿರ್ಮಾಣದಲ್ಲಿ ತಮ್ಮ ಶ್ರಮ ಸೇವೆಯನ್ನಜ ಸಲ್ಲಿಸಿದ್ದಾರೆ ಈ ಮೂಲಕ ಜಿಲ್ಲೆಯ ಯುವಕರಿಗೆ ಮಾದರಿಯಾಗುವದರ ಜೊತೆಗೆ ಸರಕಾರದಿಂದ ನಡೆಯ ಬೇಕಾಗಿದ್ದ ಅಭಿವೃದ್ದಿ ಕಾರ್ಯಗಳನ್ನು ತಾವೇ ಸ್ವತಹ ಸೇವಾ ರೂಪದಲ್ಲಿ ಮಾಡಿ ಕೊಡುವದರ ಮೂಲಕ ಆಡಳಿತದಲ್ಲಿನ ವೈಪಲ್ಯವನ್ನು ಹೊರ ಹಾಕಿದ್ದಾರೆ ಕಳೆದ ಆರು ತಿಂಗಳ ಹಿಂದೆ ಯುವ ತೇಜಸ್ಸು ಬಳಗ ಬೆಳ್ತಂಗಡಿಯಲ್ಲೂ ಕಾಲು ಸೇತುವೆ ನಿರ್ಮಿಸಿ ಆ ಭಾಗದಲ್ಲಿ ಜನರ ಭಾಂದವ್ಯ ಬೆಸೆಯುವ ಕೆಲಸವನ್ನೂ ಮಾಡಿದ್ದರು.ಇದೀಗ ಯಾವುದೇ ಕಡೆಗಳಲ್ಲಿ ಹೊಳೆ ದಾಟಲು ಅಪಾಯ ಕಾರಿಯಾಗಿದ್ದು ಮರದ ಕಾಲು ಸೇತುವೆಗಳಲ್ಲೇ ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಅನಿವಾರ್ಯತೆಯಿದ್ದಲ್ಲಿ ಅಂತಹ ಬಾಗದಲ್ಲಿ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಡಲು ಯುವ ತೇಜಸ್ಸು ಟ್ರಸ್ಟ್ ಸಿದ್ದವಿರುವುದಾಗಿ ತಿಳಿಸಿದೆ. ಮತ್ತು 94801 77770 ಸಂಖ್ಯೆಗೆ ಕರೆ ಮಾಡಬಹುದಾಗಿದೆ.


