

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರಿಗೆ ಎ.18 ರಂದು ಬಿ ಪಾರ್ಮ್ ಸಿಗಲಿದ್ದು ಬಿ ಪಾರ್ಮ್ ನೊಂದಿಗೆ ಕೃಷ್ಣಪ್ಪರು ಎ.18ರಂದು 10.30 ಕ್ಕೆ ನಾಮಪತ್ರ ಸಲ್ಲಿಸಲಿದ್ದು , ಸುಳ್ಯ ಕಾಂಗ್ರೇಸ್ ಚುನಾವಣಾ ಕಚೇರಿಯಿಂದ ಸುಳ್ಯ ಮತ್ತು ಕಡಬ ಬ್ಲಾಕ್ ಎಲ್ಲಾ ಕಾರ್ಯಕರ್ತರು ಮೆರವಣಿಗೆಯಲ್ಲಿ ತಾ.ಪಂ ಕಚೇರಿಗೆ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ, ಇದೇ ಸಂದರ್ಭ ಪುರಭವನದಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು ಕೆಪಿಸಿಸಿ ವಕ್ತಾರೆ ಭವ್ಯನರಸಿಂಹ ಭಾಗವಹಿಸಲಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ವಿವರವನ್ನು ತಿಳಿಸಿದರು.ರಾಜ್ಯದಲ್ಲಿ ಮುಂದಿನ ಸರಕಾರ ಕಾಂಗ್ರೇಸ್ ನಡೆಸಲಿದ್ದು ಸುಳ್ಯದ ಸಮಸ್ಯೆಗಳಿಗೆ ಕೃಷ್ಣಪ್ಪರು ದ್ವನಿಯಾಗಲಿದ್ದಾರೆ ಎಂದು ಹೇಳಿದರು..

ಪಕ್ಷ ಗೆಲುವಿಗಾಗಿ ಟೀಕೆಗಳಿಗೆ ಉತ್ತರಿಸಲು ಹೋಗಿಲ್ಲ.
ಈ ಸಂದರ್ಭದಲ್ಲಿ ಎನ್ ಜಯಪ್ರಕಾಶ್ ರೈ ಮಾತನಾಡಿ
ರಾಜಕೀಯ ಪಕ್ಷ ಈ ದೇಶದ ಒಕ್ಕೂಟ ವ್ಯವಸ್ಥೆಯ ಒಂದು ಭಾಗ ,ಚುನಾವಣೆ ಬಂದಾಗ ಆಕಾಂಕ್ಷಿಗಳು ಹುಟ್ಟಿಕೊಳ್ಳುವುದು ಸಹಜ, ಸುಳ್ಯದಲ್ಲಿ ಇಬ್ಬರು ಆಕಾಂಕ್ಷಿಗಳನ್ನು ಬೆಳೆಸಿದ್ದೇವೆ,ಇಬ್ಬರು ಸ್ಪರ್ಧಾತ್ಮಕವಾಗಿ ಕೆಲಸ ಮಾಡಿದ್ದಾರೆ ಒಬ್ಬರಿಗೆ ಸೀಟು ಸಿಕ್ಕುವುದು ಸಾಮಾನ್ಯ,ಕೃಷ್ಣಪ್ಪರಿಗೆ ಟಿಕೆಟ್ ಸಿಕ್ಕಿ, ನಂದಕುಮಾರ್ ರಿಗೆ ಟಿಕೆಟ್ ಸಿಕ್ಕಿಲ್ಲ, ಈ ಬಗ್ಗೆ ಸಾಕಷ್ಟು ಟೀಕೆಗಳು ಬಂದಿತ್ತು ಪಕ್ಷ ಗೆಲುವಿಗಾಗಿ ಟೀಕೆಗಳಿಗೆ ಉತ್ತರಿಸಲು ಹೋಗಿಲ್ಲ,ಪಕ್ಷದಲ್ಲಿ ಕಾರ್ಯಕರ್ತರಿಗೂ ಬದ್ಧತೆಗಳು ಬೇಕು, ಯೂತ್ ಮಟ್ಟದಿಂದ ಬೂತ್ ಮಟ್ಟದವರೆಗೆ ಸಂಘಟಣೆ ಗಟ್ಟಿಯಾಗಿದೆ ಎಂದರು.

ಯಾರು ಗೊಂದಲ ಉಪಶಮನ ಮಾಡಬೇಕಿತ್ತೋ ಅವರಿಂದಲೇ ಗೊಂದಲ ನಿರ್ಮಾಣವಾಗಿದೆ
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ , ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಮಾತನಾಡಿ
ಇಬ್ಬರಿಗೂ ಕೆ ಪಿ ಸಿ ಪಕ್ಷ ಸಂಘಟನೆ ಮಾಡಿ ಎಂದು ಹೇಳಿತ್ತು, ಅಭ್ಯರ್ಥಿತನಕ್ಕಾಗಿ ಅಲ್ಲ ಪಕ್ಷಕ್ಕಾಗಿ ಸಂಘಟನೆ ಬರಬೇಕಿತ್ತು ಆದರೆ ಇಬ್ಬರು ಆಕಾಂಕ್ಷಿಯಿಯಾದರು, ನಾವೆಲ್ಲ ಪಕ್ಷದ ಪರವಾಗಿದ್ದೇವೆ ,ನಂದಕುಮಾರ್ ಗೆ ಟಿಕಟ್ ಸಿಕ್ಕಿ ಕೃಷ್ಣಪ್ಪ ಈ ರೀತಿ ಮಾಡುತ್ತಿದ್ದರೂ ನಾವು ಇದೇ ನಿರ್ಣಯ ಮಾಡುತ್ತಿದ್ದೆವು, ಸಂಘರ್ಷದಿಂದ ಟೀಕೆಗಳಿಗೆ ಉತ್ತರಿಸಿದರೆವಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಉತ್ತರಿಸಲು ಹೋಗಿಲ್ಲ , ರಮಾನಾಥ ರೈಗಳು ಮೊನ್ನೆ ಬರಬೇಕಾಗಿದ್ದು ನಂದಕುಮಾರ್ ಅಭಿಮಾನಿಗಳನ್ನು ಸಮದಾನ ಪಡಿಸಲು, ಹೊರತು ಅಭ್ಯರ್ಥಿ ಆಯ್ಕೆಯಾದ ಮೇಲೆ ಅಭಿಪ್ರಾಯ ಸಂಗ್ರಹಕ್ಕೆ ಅಲ್ಲ, ಯಾರು ಗೊಂದಲ ಉಪಶಮನ ಮಾಡಬೇಕಿತ್ತೋ ಅವರಿಂದಲೇ ಗೊಂದಲ ನಿರ್ಮಾಣವಾಗಿದೆ . ಜೊತೆಗೆ ಬಿ ಜೆ ಪಿ ಹಾಗೂ ಎಸ್ ಡಿ ಪಿ ಐ ಯವರು ಸೇರಿ ನಂದಕುಮಾರ್ ಅಭಿಮಾನಿ ಬಳಗದಲ್ಲಿ ಸೇರಿಸಿ ಗೊಂದಲ ಉಂಟು ಮಾಡಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಪಕ್ಷೇತರ ಗೆದ್ದ ಇತಿಹಾಸವಿಲ್ಲ
ಕೆಪಿಸಿಸಿ ಮುಖಂಡ ಟಿ. ಎಂ. ಶಹೀದ್ ಮಾತನಾಡಿ
ಬಿಜೆಪಿಯಿಂದ ಹಲವರು ಕಾಂಗ್ರೇಸ್ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೇಸ್ ಗೆಲುವಿಗೆ ಅವಕಾಶವಿದೆ. ದಕ್ಷಿಣ ಕನ್ನಡ ಇತಿಹಾಸದಲ್ಲಿ ಪಕ್ಷೇತರರು ಗೆದ್ದ ಇತಿಹಾಸವಿಲ್ಲ ಎರಡು ಬಾರಿ ಶಾಸಕರಾರ ಕುಶಲರೇ ಪಕ್ಷೇತರವಾಗಿ ನಿಂತಾಗ ಗೆದ್ದಿಲ್ಲ ಎಂದು ಹೇಳಿದರು.

110 ಕೆ ವಿ ವಿದ್ಯುತ್ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿಲ್ಲ.
ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಕೇಂದ್ರ ಸರಕಾರದ ವೈಪಲ್ಯ ಬೆಲೆ ಏರಿಕೆ, ನಿರುದ್ಯೋಗ ರಾಜ್ಯ ಸರಕಾರದ ೪೦% ಕಮಿಷನ್ಇವೆಲ್ಲವನ್ನು ಜನತೆ ನೋಡಿದೆ ಕರ್ನಾಟಕ ಬ್ರಷ್ಟಾಚಾರದ ರಾಜದಾನಿಯಾಗಿದೆ : ಸುಳ್ಯದ ಪ್ರಮುಖ ಸಮಸ್ಯೆ ೧೧೦ ಕೆ.ವಿ ವಿದ್ಯುತ್ ಟೆಂಡರ್ ಪ್ರಕ್ರೀಯೆ ಪೂರ್ಣ ಆಗಿಲ್ಲ,ಭರವಸೆಗಳನ್ನೇ ನೀಡುತ್ತಿದ್ದಾರೆ,ಈ ಬಾರಿ ಕಾಂಗ್ರೇಸ್ ನಿಂದ ಹಲವು ಗ್ಯಾರಂಟಿ ಯೋಜನೆ ಇದ್ದು, ಅಧಿಕಾರಕ್ಕೆ ಬಂದಲ್ಲಿ ಈ ಗ್ಯಾರಂಟಿ ಜನಸಾಮಾನ್ಯರ ಕೈ ಸೇರಲಿದೆ ಎಂದರಲ್ಲದೆ ಈ ಬಾರಿ ಕರಾವಳಿ ಗಾಗಿ ವಿಶೇಷ ವಾಗಿ ಅಡಿಕೆ ಹಳದಿರೋಗ ಮತ್ತು ಎಲ್ಲೆ ಚುಕ್ಕಿ ರೋಗಕ್ಕೆ ರೈತರಿಗೆ ಪರಿಹಾರ ಮತ್ತು ಸಂಶೋಧನೆಗೆ ಪ್ರತ್ಯೇಕ ಪ್ಯಾಕೇಜ್ ಈ ಬಾರಿ ಕಾಂಗ್ರೇಸ್ ಪ್ರಣಾಳಿಕೆಯಲ್ಲಿದೆ ಎಂದರು.
ಸುದ್ದಿ ಗೋಷ್ಟಿಯಲ್ಲಿ ಕಾಂಗ್ರೇಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಮಹಿಳಾ ಬ್ಲಾಕ್ ಅಧ್ಯಕ್ಷೆ ಗೀತಾಕೋಲ್ಚಾರ್, ಕೀರ್ತನ್ ಕೊಡಪಾಲ ಮೊದಲಾದವರಿದ್ದರು.,