ಮುಳ್ಯ ಅಟ್ಲೂರು ಹಿ ಪ್ರಾ ಶಾಲೆಯ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರವಿಪ್ರಕಾಶ್ ಅಟ್ಲೂರು ಕೊಡುಗೆಯಲ್ಲಿ ನಿರ್ಮಾಣವಾದ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ.
ಲ್ಯಾಪ್ ಟಾಪ್ ಸ್ವೀಕಾರ, ಬೀಳ್ಕೊಡುಗೆ ಕಾರ್ಯಕ್ರಮ


ಸುಳ್ಯ: ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪೋಷಕರಾದ ರವಿಪ್ರಕಾಶ್ ಅಟ್ಲೂರು ಮತ್ತು ಪದ್ಮಲತಾ ಅಟ್ಲೂರು ಕೊಡುಗೆಯಾಗಿ ನಿರ್ಮಿಸಿ ಕೊಟ್ಟ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಬೆಂಗಳೂರು ಪ್ರಣವ ಫೌಂಡೇಶನ್ ನೀಡುವ ಲ್ಯಾಪ್ ಟಾಪ್ ಸ್ವೀಕಾರ ಹಾಗೂ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ ಕೇನಾಜೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು.೩೧ ರಂದು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮುಳ್ಯ ಅಟ್ಲೂರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶ್ರೀ ಮಹಾಗಣಪತಿ ಭಜನಾಮಂಡಳಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅದ್ಯಾಪಕ ವೃಂದ ಪೋಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಗಳ ಉದ್ಘಾಟಿಸಿ ಶುಭ ಹಾರೈಸಿದರು, ಸಭಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಉದ್ಘಾಟನೆಯನ್ನು
ನಿವೃತ ಶಿಕ್ಷಕಿ ಕಲಾವತಿ ವೆಂಕಟಕೃಷ್ಣಯ್ಯ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸುಳ್ಯ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆ ಮಾತ್ರ ಅಮೋಘವಾದುದು, ದ ಕ ಜಿಲ್ಲೆಯಲ್ಲಿಯೇ ಸುಳ್ಯಕ್ಕೆ ಉತ್ತಮ ಹೆಸರಿದೆ ಎಂದು ಹೇಳಿದರು. ಇನ್ನೊರ್ವ ಮುಖ್ಯ ಅತಿಥಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ ವಿದ್ಯೆಗಿರುವ ಮಹತ್ವ ಜಗತಿನಲ್ಲಿ ಯಾವುದೂ ಇಲ್ಲ, ಯಾರೊಬ್ಬರು ಕಿತ್ತು ಕೊಳ್ಳಲಾಗದ ಸಂಪತ್ತು , ಮತ್ತು ತೂಕವಿಲ್ಲದ ಸಂಪತ್ತು ವಿದ್ಯೆ , ಇಂದು ಈ ದೇಶದಲ್ಲಿ ಯಾರಾದರು ಸಾದನೆ ಮಾಡಿದ್ದರೆ ಅವರು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದವರು, ದೇಶದ ಅಭ್ಯುದಯ ಹಳಿಗಳಲ್ಲಿಯೇ ಅಡಗಿದೆ ಎಂದು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ವಿಶಾಲಾಕ್ಷಿ,
ಪೋಲಿಸ್ ಕ್ರೈಂ ವಿಭಾಗ ಉಪನಿರೀಕ್ಷಕಿ ಸರಸ್ವತಿ, ಶಾಲಾ ಎಸ್ ಡಿ ಎಂಸಿ ಸಮಿತಿ ಅದ್ಯಕ್ಷ ದೇವಿ ಪ್ರಸಾದ್ ಅತ್ಯಾಡಿ , ಶಾಲಾ ಮಹಾ ಪೋಷಕ ರವಿಪ್ರಕಾಶ್ ಅಟ್ಲೂರು , ಅಜ್ಜಾವರ ಗ್ರಾಮ ಪಂ ಸದಸ್ಯರಾದ ವಿಶ್ವನಾಥ ಮುಳ್ಯ ಮಠ, ಶಿವಕುಮಾರ, ರಾಘವ, ಮಹಾಗಣಪತಿ ಭಜನಾ ಮಂದಿರ ಅಧ್ಯಕ್ಷ ಧರ್ಮಪಾಲ ಬಟ್ಟಮಕ್ಕಿ, ದುರ್ಗಾ ಶಾಮಿಯಾನ ಮಾಲಕ ರವಿಪ್ರಕಾಶ್ ಬೊಮ್ಮೆಟ್ಟಿ,ಮೊದಲಾದವರು ವೇದಿಕೆಯಲ್ಲಿದ್ದರು.

ನಿವೃತ್ತ ಶಿಕ್ಷಕರಾದ ಶಿವರಾಮ ಕೇನಾಜೆ ದಂಪತಿಗಳನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು
ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ಕಿರಣ್ ಅಟ್ಲೂರು ಸ್ವಾಗತಿಸಿ. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
