ರಾಜ್ಯ

ಫೆ.24,25 ಮತ್ತು 26 ರಂದು ಮೊಗರ್ಪಣೆ ಮುಹಿಯದ್ಧೀನ್ ಜುಮಾ ಮಸ್ಜಿದ್ ವಠಾರದಲ್ಲಿ ಮಖಾಂ ಉರೂಸ್ ಮತ್ತು ಮೂರು ದಿನಗಳ ಧಾರ್ಮಿಕ ಮತಪ್ರಭಾಷಣ.

ಸುಳ್ಯ ಮೊಗರ್ಪಣೆ ಅಸ್ಸಯ್ಯದ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್( ಖ.ಸಿ) ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆ ಹಾಗೂ ಮೂರು ದಿನಗಳ ಮತ ಪ್ರವಚನ ಕಾರ್ಯಕ್ರಮ ಫೆ 24 ರಿಂದ ಫೆ.26ರ ವರೆಗೆ ಖಾಝಿ ಅಸ್ಸಯ್ಯದ್ ಖುರ್ರತ್ತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್, (ಖಾಝಿ ಮೊಗರ್ಪಣೆ) ರವರ ಘನ ನೇತ್ರತ್ವದಲ್ಲಿ ನಡೆಯಲಿರುವುದು ಎಂದು ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಸಕಾಫಿರವರು ತಿಳಿಸಿದ್ದಾರೆ ಅವರು ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ತಿಳಿಸಿದ್ದಾರೆ.


ಫೆಬ್ರವರಿ 24 ರಂದು ಬೆಳಿಗ್ಗೆ 10.30 ಕ್ಕೆ ಮೊಗರ್ಪಣೆ ಹೆಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ರವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.ಇದರ ನೇತ್ರತ್ವವನ್ನು ಆದೂರು ಅಸ್ಸಯ್ಯಿದ್ ಅಶ್ರಪ್ ತಂಙಳ್ ಕೇರಳ ಆದೂರು ವಹಿಸಲಿದ್ದು,ಅದೇ ದಿನ ಸಂಜೆ ನಡೆಯುವ ಧಾರ್ಮಿಕ ಮತಪ್ರಭಾಷಣದ ಸಭಾ ವೇದಿಕೆಯನ್ನು ಅಸ್ಸಯ್ಯಿದ್ ಕುಂಞಿ ಕೋಯಾ ತಂಙಳ್ ಸ-ಅದಿ ಸುಳ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ಕಬೀರ್ ಇಮಮಿ ಸಕಾಫಿ ಗೋಳಿಯಡ್ಕ ಕಾಸರಗೋಡು ಇವರು ಮಾಡಲಿದ್ದು ವೇದಿಕೆಯಲ್ಲಿ ಧಾರ್ಮಿಕ ಪಂಡಿತರು, ಉಮರಾ ನೇತಾರರು ಭಾಗವಹಿಸಲಿದ್ದಾರೆ.


ಫೆ.25 ರಂದು ಸಂಜೆ ಬಹು ಅಸ್ಸಯ್ಯಿದ್ ಖುರ್ರತ್ತುಸ್ಸಾದಾತ್ ಮೊಗರ್ಪಣೆ ಖಾಝಿ ಫಝಲ್ ಕೊಯಮ್ಮ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಖತಂ ದುವಾ ಮಜ್ಲೀಸ್ ನಡೆಯಲಿದೆ.
ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಹಾಫಿಲ್ ಮಶ್ ಹೂದ್ ಸಖಾಫಿ ಗೂಡಲ್ಲೂರು ನಿರ್ವಹಿಸಲಿದ್ದು ವೇದಿಕೆಯಲ್ಲಿ ಮೊಗರ್ಪಣೆ ವಿವಿಧ ನೇತಾರರು ಉಪಸ್ಥಿತಿಯಿರಲಿದ್ದಾರೆ.
ಫೆ 26ರಂದು ಸಂಜೆ ಮಗರಿಬ್ ನಮಾಜ್ ಬಳಿಕ ಮೌಲಿದ್ ಪಾರಾಯಣ ನಡೆಯಲಿದ್ದು,
ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದವರಿಂದ ಕವಾಲಿ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮವನ್ನು ಸ್ಥಳಿಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ವಹಿಸಲಿದ್ದಾರೆ.
ಸಾಮೂಹಿಕ ದುವಾ ಕಾರ್ಯಕ್ರಮಕ್ಕೆ ಅಸ್ಸಯ್ಯಿದ್ ಮೊಹಮ್ಮದ್ ಸಮೀಮ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದು ಮುಖ್ಯ ಪ್ರಭಾಷಣವನ್ನು ಹಂಝ ಮಿಸ್ಬಾಯಿ ಓಟಪದವು ಮಾಡಲಿದ್ದಾರೆ .
ವೇದಿಕೆಯಲ್ಲಿ ಗಾಂಧಿನಗರ ಜುಮಾ ಮಸೀದಿ ಕತೀಬರಾದ ಅಶ್ರಫ್ ಕಾಮಿಲ್ ಸಕಾಫಿ ಸೇರಿದಂತೆ ವಿವಿಧ ನೇತಾರರು ಉಪಸ್ಥಿತರಿರುತ್ತಾರೆ.
ಉರೂಸ್ ಸಮಾರಂಭದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಲಿದ್ದು, ವಿವಿಧ ಧಾರ್ಮಿಕ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರಿಗೆ ಅನ್ನದಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಅವರು ಪತ್ರಿಕಾಗೋಷ್ಠಿ ಮೂಲಕ ಕೇಳಿಕೊಂಡಿದ್ದಾರೆ.ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ವತಿಯಿಂದ ನಡೆಸಿದ ಈ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪಿ ಎಂ ಅಬ್ದುಲ್ ಸಮದ್ ಹಾಜಿ, ಜಮಾಅತ್ ಸದಸ್ಯ ಅಬ್ದುಲ್ಲಾ ಹಾಜಿ ಜಯನಗರ ಉಪಸ್ಥಿತರಿದ್ದರು.

Leave a Response

error: Content is protected !!