

ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ
ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ ಮೂಲತ: ಮಂಗಳೂರಿನವರು.
ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ ಕಾರ್ತಿಕ್ ಕಶ್ಯಪ್, ಐಪಿಎಸ್ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಮೂಲತ: ಕಾಸರಗೋಡಿನವರು. ಪ್ರತಿಷ್ಟಿತ ಖಂಡಿಗೆ ಮನೆತನಕ್ಕೆ ಸೇರಿದವರಾಗಿದ್ದಾರೆ.
23ನೇ ವಯಸ್ಸಿನಲ್ಲಿ ಐಪಿಎಸ್ ಪದವಿ ಪಡೆದಿರುವ ಕಾರ್ತಿಕ್ ಕಶ್ಯಪ್ ಈ ಹಿಂದೆ ಗೋವಾದಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಕೇಂದ್ರಾಡಳಿತ ಪ್ರದೇಶದ ಕೇಡರ್ ಗೆ ಸೇರಿದ್ದಾರೆ.
ಕಾರ್ತಿಕ್ ಕಶ್ಯಪ್ ಪತ್ನಿ ಪ್ರಿಯಾಂಕಾ ಕೂಡ ಐಪಿಎಸ್
ಅಧಿಕಾರಿ. ಮೂಲತ: ಚಂಢೀಗಢದವರಾಗಿದ್ದಾರೆ.
add a comment