ಮೇನಾಲದಲ್ಲಿ ಕೃಷ್ಣಾ ಅಷ್ಠಮಿ ಕಾರ್ಯಕ್ರಮ ಸೌಹಾರ್ಧತೆಯಲ್ಲಿ ನಡೆಸುವ ನಿಟ್ಟಿನಲ್ಲಿ ತಾಹಶಿಲ್ಧಾರ್ ನೇತ್ರತ್ವದಲ್ಲಿ ಶಾಂತಿ ಸಭೆ


ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಮಸೀದಿ ಮತ್ತು ಭಜಾನಾ ಮಂದಿರದ ನಡುವೆ ವಿವಾಧಿತ ಜಾಗದಲ್ಲಿ ವರ್ಷಂಪ್ರತಿಯಂತೆ ಅಷ್ಠಮಿ ಕಾರ್ಯಕ್ರಮ ನಡೆಸಲು ಭಜನಾ ಮಂದಿರ ಸಮಿತಿಯವರು ಹಾಗೂ ಅಷ್ಠಮಿ ಸಮಿತಿಯ ಜಂಠಿಯಾಗಿ ಶ್ರೀ ಕೃಷ್ಣ ಅಷ್ಠಮಿ ಪ್ರಯಯಕ್ತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎಂದು ಸುಳ್ಯ ತಾಹಶೀಲ್ದಾರ್ ಮಂಜುನಾಥ್ ನೇತ್ರತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಅಜ್ಜಾವರ ಮೇನಾಲ ಜಮಾಅತ್ ಕಮಿಟಿಯ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು, ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್‌ರವರು, ಮೇನಾಲ ಮಸೀದಿ ಮುಂಭಾಗದಲ್ಲಿರುವ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವನ್ನು ಸ್ಥಳೀಯರು ಆಯೋಜಿಸಿದ್ದು ಈ ಕಾರ್ಯಕ್ರಮ ನಡೆಯಲು ಸ್ಥಳೀಯ ಎಲ್ಲಾ ಮುಸ್ಲಿಂ ಬಾಂಧವರು ಶಾಂತಿಯನ್ನು ಕಾಪಾಡಿಕೊಂಡು ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ವಿನಂತಿ ಮಾಡಿದರು
ಮಸೀದಿ ಜಮಾತ್ ಕಮಿಟಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ನಮ್ಮ ಕಡೆಯಿಂದ ಯಾವುದೇ ಅಡ್ಡಿ ಇಲ್ಲ , ನಮ್ಮ ಗ್ರಾಮದಲ್ಲಿ ಸೌಹಾರ್ದತೆಯಿಂದ ಮುದು ವರೆಯಲು ನಾವು ಪ್ರಯತ್ನಿಸುತ್ತಿದ್ದು ಮುಂದೆ ನಡೆಯಲಿರುವ ಊರೂಸ್ ಕಾರ್ಯಕ್ರಮಕ್ಕೆ ಸೌಹಾರ್ಧತೆಯ ವಾತಾವರಣವನ್ನು ನೀವು ಕಲ್ಪಿಸ ಬೇಕು , ಜಾಗ ವಿವಾದ ಕೋರ್ಟಲ್ಲಿರುವುದರಿಂದ ಅದು ಅದರ ರೀತಿಯಲ್ಲೆ ಸಾಗಲಿದೆ ಎಂದು ಹೇಳಿದರು.
