

ಕಳೆದ 2 ಅಧಿವೇಶನದಲ್ಲಿ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಟ ಪಕ್ಷ ಮಾಹೆಯಾನ ಹತ್ತು ಸಾವಿರ ರೂಪಾಯಿ ಹೆಚ್ಚಿಸಬೇಕೆಂದು ಹಾಗು ಕೇರಳ ಮಾದರಿಯ ಆಡಳಿತವನ್ನು ಅನುಸರಿಸಬೇಕೆಂಬುದರ ಬಗ್ಗೆ ನಾನು ವಿಧಾನ ಪರಿಷತ್ತಿನಲ್ಲಿ ಸುರ್ಧೀಘವಾಗಿ ಚರ್ಚೆ ನಡೆಸಿದ್ದೆ. ಆದರೆ ರಾಜ್ಯ ಸರ್ಕಾರವು ಇಂದು ಗೌರವಧನವನ್ನು ಕೇವಲ ರೂಪಾಯಿ 1000 ರಿಂದ 2000 ವರೆಗೆ ಹೆಚ್ಚಿಸಿರುವುದನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸ್ವಾಗತಿಸಿದ್ದಾರೆ.
ಕೊನೆಯ ಪಕ್ಷ 5000 ರೂಪಾಯಿ ಹೆಚ್ಚಿಸುವರೆಂಬ ಆಶಾ ಭಾವನೆ ನನ್ನಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಪಂಚಾಯತ್‍ನ ಚುನಾಯಿತ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸುವವರಾಗಿರುತ್ತಾರೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಿಸಲಾತಿ ಇರುವುದರಿಂದ ಮಹಿಳೆಯರು ಮತ್ತು ದುರ್ಬಲವರ್ಗದವರು ಚುನಾಯಿತ ಪ್ರತಿನಿಧಿಗಳಾಗಿದ್ದು ಅವರ ದೈನಂದಿನ ಜೀವನ ನಡೆಸಲು ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ ಆದುದರಿಂದ ಕನಿಷ್ಟ ಪಕ್ಷ 5000 ರೂಪಾಯಿ ಗೌರವಧನವನ್ನು ಹೆಚ್ಚಿಸಿದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬಹುದು ಎಂಬುದು ನನ್ನ ಭಾವನೆ.ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.